
ನಾಗ್ಪುರದಲ್ಲಿ ವಿವಾಹಿತನ ವಿರುದ್ಧ ಅತ್ಯಾಚಾರ ಆರೋಪ ಮಾಡಲಾಗಿದ್ದು, ಆತ ಫೇಸ್‌ಬುಕ್ ಲೈವ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.



ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ತನ್ನ ಗೆಳತಿ ಮತ್ತು ಆಕೆಯ ಕುಟುಂಬ ಸದಸ್ಯರು ಅತ್ಯಾಚಾರವೆಸಗಿರುವ ಬಗ್ಗೆ ಬ್ಲ್ಯಾಕ್‌ಮೇಲ್ ಮಾಡಿದ್ದು, ಆತ ಫೇಸ್‌ಬುಕ್ ಲೈವ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೆಪ್ಟೆಂಬರ್ 10 ರಂದು 38 ವರ್ಷದ ವ್ಯಕ್ತಿ ಮನೀಶ್ ತನ್ನ ಫೇಸ್‌ಬುಕ್ ಲೈವ್‌ನಲ್ಲಿ, ತನ್ನ ಗೆಳತಿ ಎಂದು ಹೇಳಲಾದ 19 ವರ್ಷದ ಮಹಿಳೆ ಕಾಜಲ್ ಮತ್ತು ಅವಳ ಕುಟುಂಬ ಸದಸ್ಯರು ಅತ್ಯಾಚಾರದ ಆರೋಪದ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು 5 ಲಕ್ಷಕ್ಕೆ ಬೇಡಿಕೆಯಿಟ್ಟರು. ಹಣ ನೀಡಲು ವಿಫಲವಾದರೆ ತನ್ನ ವಿರುದ್ಧ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದರು ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 6 ರಂದು ಗೆಳತಿ ತನ್ನ ಮನೆಯಿಂದ ಕಾಣೆಯಾಗಿದ್ದಳು ಮತ್ತು ಆಕೆಯ ಕುಟುಂಬ ಸದಸ್ಯರು ಮನೀಷ್ ಜೊತೆ ಓಡಿಹೋಗಿದ್ದಾಳೆ ಎಂದು ಆರೋಪಿಸಿದರು.
ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿರುವ ಮನೀಶ್ ಗೆಳತಿಯ ಕುಟುಂಬದ ಕಿರುಕುಳದ ನಂತರ ನಾಗಪುರದಲ್ಲಿ ನದಿಗೆ ಹಾರಿದ್ದಾನೆ. ಮನೀಶ್ ಮಹಿಳೆಯೊಂದಿಗಿನ ಯಾವುದೇ ದೈಹಿಕ ಸಂಬಂಧ ಹೊಂದಿಲ್ಲ ಎಂದು ಹೇಳಿಕೊಂಡಿದ್ದಾನೆ.
ಫೇಸ್‌ಬುಕ್ ಲೈವ್ ವಿಡಿಯೋ ಹೊರಬಿದ್ದ ನಂತರ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ವ್ಯಕ್ತಿಯ ಶವವನ್ನು ನದಿಯಿಂದ ವಶಪಡಿಸಿಕೊಳ್ಳಲಾಗಿದ್ದು, ನಾಗಪುರದ ಕಲಮನ ಪೊಲೀಸರು ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.