ಇಂದಿರಾ ಕ್ಯಾಂಟೀನ್ ನನ್ನ ಬ್ಯುಸಿನೆಸ್, ಆದರೆ ಇದು ನನಗೆ ಆಗಿರುವ ವಂಚನೆ’ : ಉದ್ಯಮಿ ಗೋವಿಂದಬಾಬು ಪೂಜಾರಿ ಹೇಳಿಕೆ

ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಶದಲ್ಲಿರುವ ಚೈತ್ರ ಕುಂದಾಪುರ ಇಂದು ಬೆಳಿಗ್ಗೆ ಇದು ಇಂದಿರಾ ಕ್ಯಾಂಟೀನ್ ಬಿಲ್ ಪೆಂಡಿಂಗ್ ಇದೇ ಅದಕ್ಕೋಸ್ಕರ ಈ ಷಡ್ಯಂತರ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಬಾಬು ಪೂಜಾರಿಯವರು,ಇಂದಿರಾ ಕ್ಯಾಂಟೀನ್ಗು ಇವರಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಅದು ನನ್ನ ಬಿಜಿನೆಸ್ ಇದು ನನಗೆ ಆಗಿರುವ ವಂಚನೆ ಎಂದು ಬೆಂಗಳೂರಿನ ಸಿಸಿಬಿ ಕಚೇರಿ ಬಳಿ ಉದ್ಯಮಿ ಗೋವಿಂದಬಾಬು ಪೂಜಾರಿ ಹೇಳಿಕೆ ನೀಡಿದರು.

ಸಿಸಿಬಿ ಅಧಿಕಾರಿಗಳು ಕರೆದಿದ್ದಕ್ಕೆ ವಿಚಾರಣೆಗೆ ಆಗಮಿಸಿದ್ದೇನೆ. ದೂರಿನಲ್ಲಿ ಯಾರೆಲ್ಲಾ ಇದ್ದಾರೋ ಅವರನ್ನೆಲ್ಲ ಭೇಟಿಯಾಗಿದ್ದೇನೆ. ಸಿಸಿಬಿ ಅಧಿಕಾರಿಗಳ ವಿಚಾರಣೆ ಮುಗಿಸಿಕೊಂಡು ಮತ್ತೆ ಮಾತನಾಡುತ್ತೇನೆ ಎಂದು ವಿಚಾರಣೆಗೆ ಮುನ್ನ ಉದ್ಯಮಿ ಗೋವಿಂದ ಪೂಜಾರಿ ಹೇಳಿಕೆ ನೀಡಿದರು.

ಮತ್ತೆ ಸಿಸಿಬಿ ಕಚೇರಿಗೆ ಕರೆತಂದ ಅಧಿಕಾರಿಗಳು

ಉದ್ಯಮಿ ಒಬ್ಬರಿಗೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಸುಮಾರು ಐದು ಕೋಟಿಗೂ ಹೆಚ್ಚು ವಂಚನೆ ಮಾಡಿರೋ ಪ್ರಕರಣದಲ್ಲಿ ಹಿಂದೂ ಸಂಘಟನೆಯ ಪ್ರಮುಖ ನಾಯಕಿ ಚೈತ್ರ ಕುಂದಾಪುರನ್ನು ಇಂದು ವೈದ್ಯಕೀಯ ತಪಾಸಣೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ಸಿಸಿಬಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೈತ್ರಾಗೆ ವೈದ್ಯಕೀಯ ತಪಾಸಣೆ ಅಂತ್ಯಗೊಂಡಿದ್ದು ಮತ್ತೆ ಸಿಸಿಬಿ ಕಚೇರಿಗೆ ಚೈತ್ರಳನ್ನು ಸಿಸಿಬಿ ಪೊಲೀಸರು ಕರೆತಂದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಿಸಿಬಿ ಕಚೇರಿ ಇದ್ದು ತಪಾಸಣೆ ನಂತರ ಪುನಹ ಕರೆ ತಂದಿದ್ದಾರೆ.

Leave a Reply