
ಮಂಗಳೂರು: ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕುದ್ರೋಳಿಯ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.



ಕುದ್ರೋಳಿಯ ಮೊಯ್ದಿನ್ ನಗರದ ಝಹೂರ್-ನಸೀರಾ ದಂಪತಿಯ ಪುತ್ರ ನಾಹಿದ್ ಸಫಾನ್ (28) ಮೃತಪಟ್ಟ ಯುವಕನಾಹಿದ್ ಸಫಾನ್ ಅವರು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಗುರುವಾರ ಬೆಳ್ಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಯಲಹಂಕ ಬಿಬಿ ರಸ್ತೆಯ ಏರೋ ಡ್ರಂ ಬಳಿ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ವರದಿಯಾಗಿದೆ.ಇನ್ನು ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದ ನಾಹಿದ್ ಸಫಾನ್ ತಂದೆ ಮತ್ತು ತಾಯಿ ಹಾಗೂ ಅಣ್ಣ, ಅಕ್ಕ, ಪತ್ನಿಯನ್ನು ಅಗಲಿದ್ದಾರೆ.