Visitors have accessed this post 310 times.
ಬೆಂಗಳೂರು: ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಒಬ್ಬರಿಗೆ 5 ಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಹಿಂದೂ ಹೋರಾಟಗಾರ್ತಿ ಚಿತ್ರಾ ಕುಂದಾಪುರ ಮೂರ್ಛೆ ರೋಗದಿಂದ ಬಳಲುತ್ತಿರುವ ಮಾಹಿತಿ ಬಹಿರಂಗವಾಗಿದೆ.
ಸಿಸಿಬಿ ಕಚೇರಿಯಲ್ಲಿ ನಿನ್ನೆ ವಿಚಾರಣೆಗೆ ಹಾಜರಾಗಿದ್ದ ವೇಳೆಯೂ ಏಕಾಏಕಿ ಚೈತ್ರಾ ಕುಂದಾಪುರ ಕುಸಿದುಬಿದ್ದಿದ್ದರು.
ವಿಚಾರಣೆ ಬಳಿಕ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇದೀಗ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಚೈತ್ರಾ ಕುಂದಾಪುರ, ಮತ್ತೆ ಮೂರ್ಛೆ ಹೋಗಿದ್ದು, ಆಕೆಯ ಬಾಯಿಯಲ್ಲಿ ನೊರೆ ಕೂಡ ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೈತ್ರಾ ಕುಂದಾಪುರ ಮೂರ್ಛೆ ರೋಗದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.