Visitors have accessed this post 650 times.
ಸುರತ್ಕಲ್ : ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಸುವರ್ಣ ಕನ್ನಡ ರಾಜ್ಯೋತ್ಸವವು ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಾಧ್ಯಂತ ಧ್ವಜಾರೋಹಣ ಮಾಡುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸುರತ್ಕಲ್ :ಸುರತ್ಕಲ್ ಬ್ಲಾಕ್ ಸಮಿತಿ ವತಿಯಿಂದ ಚೊಕ್ಕಬೆಟ್ಟು ಅಸೆಂಬ್ಲಿ ಕಚೇರಿಯ ಬಳಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಸಮಿತಿ ಸದಸ್ಯರಾದ ಇರ್ಫಾನ್ ಕಾನ, ಫಯಾಝ್ ಕಾಟಿಪಳ್ಳ, ನೌಶಾದ್ ಚೊಕ್ಕಬೆಟ್ಟು, ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ಸಲಾಂ ಕಾನ, ಕನ್ನಡ ಸಾಹಿತಿ ಶೆರೀಫ್ ನೀರ್ಮುಂಜೆ, ಕಾರ್ಪೊರೇಟರ್ ಶಂಶಾದ್ ಅಬೂಬಕ್ಕರ್, ಸುರತ್ಕಲ್ ಬ್ಲಾಕ್ ಕಾರ್ಯದರ್ಶಿ ಅರಫತ್ ಚೊಕ್ಕಬೆಟ್ಟು, ಕೃಷ್ಣಾಪುರ ವಾರ್ಡ್ ಅಧ್ಯಕ್ಷ ರಶೀದ್ ಕೃಷ್ಣಾಪುರ ಉಪಸ್ಥಿತರಿದ್ದರು.
ಅಡ್ಯಾರ್ :ಅಡ್ಯಾರ್ ಬ್ಲಾಕ್ ಸಮಿತಿ ವತಿಯಿಂದ ವಲಚ್ಚಿಲ್ ಜಂಕ್ಷನ್ ಬಳಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಎಸ್‌ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಸಮಿತಿ ಸದಸ್ಯ ಹಾಗೂ ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಯಾಸೀನ್ ಅರ್ಕುಳ, ಅಡ್ಯಾರ್ ಗ್ರಾಮ ಸಮಿತಿ ಅಧ್ಯಕ್ಷ ರಶೀದ್ ಅರ್ಕುಳ, ಅಡ್ಯಾರ್ ಪಂಚಾಯತ್ ಸದಸ್ಯರಾದ ಉಬೈದುಲ್ಲಾ ಮತ್ತು ಶಬೀರ್, ಅಡ್ಯಾರ್ ಗ್ರಾಮ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಉಪಸ್ಥಿತರಿದ್ದರು
ಗುರುಪುರ :ಗುರುಪುರ ಬ್ಲಾಕ್ ಸಮಿತಿ ವತಿಯಿಂದ ಬ್ಲಾಕ್ ಕಚೇರಿಯ ಬಳಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು ಮುಖ್ಯ ಅತಿಥಿಯಾಗಿ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು, ಗುರುಪುರ ಬ್ಲಾಕ್ ಅಧ್ಯಕ್ಷರಾದ ಅಶ್ರಫ್ ಕೈಕಂಬ, ಬ್ಲಾಕ್ ಕಾರ್ಯದರ್ಶಿ ಇರ್ಷಾದ್ ಅಡ್ಡೂರು, ಗುರುಪುರ ಪಂಚಾಯತ್ ಸದಸ್ಯರಾದ ಶಾಹಿಕ್ ಹಾಗೂ ರಿಯಾಝ್ ಅಡ್ಡೂರು, ಬ್ಲಾಕ್ ಮಾಧ್ಯಮ ಉಸ್ತುವಾರಿ ಸಾಬಿಕ್ ಕಂದಾವರ ಉಪಸ್ಥಿತರಿದ್ದರು
ಅಡ್ಡೂರು :ಗುರುಪುರ ಗ್ರಾಮ ಸಮಿತಿಯ ವತಿಯಿಂದ ಸುವರ್ಣ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ಅಡ್ಡೂರಿನ ಪಕ್ಷದ ಕಚೇರಿಯ ಮುಂಭಾಗದಲ್ಲಿ ನಡೆಯಿತು ಧ್ವಜಾರೋಹಣವನ್ನು SDPI ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ನೆರವೇರಿಸಿದರು ಗುರುಪುರ ಗ್ರಾಮ ಸಮಿತಿಯ ಅಧ್ಯಕ್ಷ ಎ.ಕೆ.ಮುಸ್ತಾಕ್ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಬದ್ರಿಯಾ ಜುಮ್ಮಾ ಮಸೀದಿ ಅಡ್ಡೂರು ಅಧ್ಯಕ್ಷರಾದ ಅಹ್ಮದ್ ಬಾವ ಅಂಗಡಿಮನೆ, ಸಲಹೆಗಾರ ಖಾಸಿಂ ಪ್ಯಾರ, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಎ.ಕೆ.ರಿಯಾಝ್,ಶಾಹಿಕ್ ಪಾಂಡೇಲ್, ಮನ್ಸೂರ್ ಟಿಬೆಟ್, ಮರಿಯಮ್ಮ್,ಬುಶ್ರಾ,ದಿಲ್ಶಾದ್ ಉಪಸ್ಥಿತರಿದ್ದರು
ಕಂದಾವರ :ಕೊಳಂಬೆ ಗ್ರಾಮ ಸಮಿತಿ ವತಿಯಿಂದ ಬ್ಲಾಕ್ ಕಚೇರಿಯ ಬಳಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು ಮುಖ್ಯ ಅತಿಥಿಯಾಗಿ ಎಸ್‌ಡಿಪಿಐ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ಇಸ್ಮಾಯಿಲ್ ಇಂಜಿನಿಯರ್ ಬಜ್ಪೆ, ಎಸ್‌ಡಿಪಿಐ ಕೊಳಂಬೆ ಗ್ರಾಮ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಕೊಳಂಬೆ, ಕಾರ್ಯದರ್ಶಿ ಆಸ್ತಾಫ್ ಕೊಳಂಬೆಏನ್ ಎಫ್ ಸಿ ಟ್ರಸ್ಟ್ ಅಧ್ಯಕ್ಷರಾದ ಹಕೀಮ್ ಪ್ಯಾರ,, ಎಮ್ ಎಸ್ ಆಲಿ,ನಿಸಾರ್ ಕರಾವಳಿ, ಹಿರಿಯರಾದ ಹಮ್ಮಬ್ಬ ಹಾಗೂ ಎ ಮಯ್ಯದ್ದಿ ಕೊಳಂಬೆ ಮಸ್ಜಿದ್ ಉಪಾಧ್ಯಕ್ಷರಾದ ಇಬ್ರಾಹಿಂ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ನಾಯಕರು, ಬ್ಲಾಕ್ ಸಮಿತಿ ನಾಯಕರು, ಗ್ರಾಮ ಮತ್ತು ವಾರ್ಡ್ ಸಮಿತಿ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು.