August 30, 2025
WhatsApp Image 2023-09-16 at 9.10.22 AM

ಕೊಪ್ಪಳ : ಉದ್ಯಮಿ ಗೋವಿಂದ ಪೂಜಾರಿ ಎಂಎಲ್​ಎ ಟಿಕೆಟ್​ ಗಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಇದೇ ಮಾದರಿ ವಂಚನೆ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲೂ ಬೆಳಕಿಗೆ ಬಂದಿದೆ. ಇದರಲ್ಲೂ ಉದ್ಯಮಿ ಲಕ್ಷ ಲಕ್ಷ ಹಣ ಕಳಕೊಂಡಿದ್ದಾನೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಾಯತ್ರಿ ತಿಮ್ಮಾರೆಡ್ಡಿ ಅವರಿಗೆ ಟಿಕೆಟ್​ ಕೊಡಿಸುವಲ್ಲಿ ಅವರ ಪತಿ ಜಿ‌.ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಭಾರಿ ಪ್ರಯತ್ನ ಮಾಡಿದ್ದರು.

ಈ ವೇಳೆ ಟಿಕೆಟ್​ ಕೊಡಿಸುತ್ತವೆಂದು ಮೂವರು ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೆ ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕನಕಗಿರಿ ಎಸ್ಸಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಗಾಯತ್ರಿ ತಿಮ್ಮಾರೆಡ್ಡಿ ಅವರು ಬಿಜೆಪಿ ಟಿಕೆಟ್​ಗಾಗಿ ಭಾರಿ ಪೈಪೋಟಿ ಮಾಡಿದ್ದರು.

ಈ ವೇಳೆ ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು ಗೌರವ್ ಟಿಕೆಟ್ ಕೊಡಿಸುತ್ತವೆಂದು ಬರೋಬ್ಬರಿ 21 ಲಕ್ಷ ಹಣ ಪಂಗನಾಮ ಹಾಕಿದ್ದಾರೆ.

ಈ ಕುರಿತು ಮೂವರ ವಿರುದ್ಧ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ತಿಮ್ಮಾರೆಡ್ಡಿ ದೂರು ದಾಖಲಿಸಿದ್ದಾರೆ.ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿದ್ದೆವೆ.

ನಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥನೆಂದು ಪರಿಚಯಿಸಿಕೊಂಡಿದ್ದ ವಿಶಾಲ್ ನಾಗ್, ನಮಗೆ ಅಮಿತ್ ಶಾ ಪರಿಚಯವಿದೆ.

ಹಾಗಾಗಿ ಅದರಲ್ಲಿ ನಿಮ್ಮ ಹೆಸರು ಮುಂಚೂಣಿಗೆ ತರುತ್ತೆವೆಂದಿದ್ದರಂತೆ.

ಹೀಗಾಗಿ ಆತನನ್ನು ನಂಬಿ ಟಿಕೆಟ್​ ಆಕಾಂಕ್ಷಿಯ ಪತಿ, ವಿಶಾಲ್ ಬ್ಯಾಂಕ್ ಖಾತೆಗೆ 2 ಲಕ್ಷ ಹಾಗೂ ನಗದು 19 ಲಕ್ಷ ನೀಡಿದ್ದರಂತೆ.

ಕೊನೆಗೆ ಟಿಕೆಟ್ ಸಿಗದೇ ಹಣವೂ ವಾಪಸ್ ಬಾರದ ಹಿನ್ನಲೆ ದೂರು ನೀಡಿದ್ದಾರೆ. ಇದೀಗ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಟಿಕೆಟ್​ಗಾಗಿ ಬಹುದೊಡ್ಡ ಡೀಲ್​ ನಡೆದಿದೆಯಾ ಎಂಬ ಪ್ರಶ್ನೆ ಮೂಡಿದೆ.

About The Author

Leave a Reply