Visitors have accessed this post 168 times.
ಕಾವೂರು : 15-09-2023 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕೂಳೂರು ಬ್ಲಾಕ್ ಸಮಿತಿಯಿಂದ ಬ್ಲಾಕ್ ಸಮಾಗಮ – 2023 ಕಾರ್ಯಕ್ರಮವು ಬ್ಲಾಕ್ ಅಧ್ಯಕ್ಷರಾದ ಅಯ್ಯೂಬ್ ಪಂಜಿಮೊಗೊರು ರವರ ಅಧ್ಯಕ್ಷತೆಯಲ್ಲಿ ಪಂಜಿಮೊಗೊರು ಪಕ್ಷದ ಕಛೇರಿಯಲ್ಲಿ ನಡೆಯಿತು.

ಜಿಲ್ಲಾ ನಿಯೋಗದಲ್ಲಿ ಎಸ್ಡಿಪಿಐ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಯವರು ಮಾತಾಡಿ ತಳಮಟ್ಟದಲ್ಲಿ ಪಕ್ಷ ಸಂಘಟಿಸಿ ಹೋರಾಟ ಮತ್ತು ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿ ಹುರುಪಿನೊಂದಿಗೆ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ರವರು ಪ್ರಾಸ್ತಾವಿಕ ಮಾತಾಡಿದರು
ಈ ಸಂಧರ್ಭದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಉಸ್ಮಾನ್ ಗುರುಪುರ, ಉಪಾಧ್ಯಕ್ಷ ನಾಸಿರ್ ಉಳಾಯಿಬೆಟ್ಟು, ಜೊತೆ ಕಾರ್ಯದರ್ಶಿ ಸಿದ್ದೀಕ್ ಅಂಗರಗುಂಡಿ ಹಾಗೂ ಬ್ಲಾಕ್, ವಾರ್ಡ್ ಮತ್ತು ಬೂತ್ ಮಟ್ಟದ ನಾಯಕರು ಉಪಸ್ಥಿತರಿದ್ದರು.
ಬ್ಲಾಕ್ ಅಧ್ಯಕ್ಷ ಅಯ್ಯೂಬ್ ಪಂಜಿಮೊಗೊರು ಸ್ವಾಗತಿಸಿ,ಬ್ಲಾಕ್ ಕಾರ್ಯದರ್ಶಿ ಮುಖ್ತರ್ ಪಂಜಿಮೊಗೊರು ಧನ್ಯವಾದಗ್ಯೆದರು.