ಬಜಪೆ: SDPI ಬ್ಲಾಕ್ ಸಮಾಗಮ, ಜಿಲ್ಲಾ ನಾಯಕರ ಉಪಸ್ಥಿತಿಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಸಮಿತಿ ಸಭೆ

ಪಕ್ಷದ ಜಿಲ್ಲಾ ಸಮಿತಿ ಕೈಗೊಂಡ ಅಭಿಯಾನವಾದ ಬ್ಲಾಕ್ ಸಮಾಗಮದ ಅಂಗವಾಗಿ ಎಸ್.ಡಿ.ಪಿ.ಐ ಜಿಲ್ಲಾ ನಿಯೋಗದ ತಂಡ ಬಜಪೆ ಪಟ್ಟಣ ಪಂಚಾಯತ್ ಸಮಿತಿ ಹಾಗೂ ಬೂತ್ ಸಮಿತಿಗಳ ಪದಾಧಿಕಾರಿಗಳನ್ನು ಭೇಟಿಯಾಗಿ ಮುಕ್ತ ಚರ್ಚೆಯನ್ನು ನಡೆಸಿದರು.

ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಬಗ್ಗೆ ಹಾಗೂ ಮುಂದಿನ ಸ್ಥಳೀಯ ಚುನಾವಣೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ಜಿಲ್ಲಾ ಸಮಿತಿ ಸದಸ್ಯರು ಹಾಗೂ ಮೂಡಬಿದರೆ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಅಬೂಬಕ್ಕರ್ ಮದ್ದ ಪಕ್ಷದ ಮುಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು .

ಈ ಸಂಧರ್ಭದಲ್ಲಿ ಮೂಡಬಿದರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಆಸಿಫ್ ಕೋಟೆಬಾಗಿಲು,ಉಪಾಧ್ಯಕ್ಷರಾದ ಇಸ್ಮಾಯಿಲ್ ಇಂಜಿನಿಯರ್ ಕ್ಷೇತ್ರ ಸಮಿತಿ ಸದಸ್ಯರಾದ ಇಮ್ರಾನ್ ಬಜಪೆ , ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಇರ್ಷಾದ್ ಬಜ್ಪೆ, ಕಾರ್ಯದರ್ಶಿ ಅನ್ವರ್ ಬಜ್ಪೆ ಸಮಿತಿಯ ಪದಾಧಿಕಾರಿಗಳು ಹಾಗೂ ಬೂತ್ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply