ಎಂಎಲ್ಎ ಟಿಕೆಟ್ ಗಾಗಿ ಕೋಟ್ಯಾಂತರ ವಂಚನೆ: ಚೈತ್ರಾ ಕುಂದಾಪುರ ಗ್ಯಾಂಗ್ ನ ಶ್ರೀಕಾಂತ ಮನೆಯಲ್ಲಿ ಲಕ್ಷ ಲಕ್ಷ ಹಣ

ಉಡುಪಿ : ಎಂಎಲ್ಎ ಟಿಕೆಟ್ ಗಾಗಿ ಕೋಟ್ಯಾಂತರ ವಂಚನೆ ಮಾಡಿದ ಚೈತ್ರಾ ಕುಂದಾಪುರ ಗ್ಯಾಂಗ್ ನ ಒಂದೊಂದೆ ಇತಿಹಾಸ ಇದೀಗ ಹೊರಬರುತ್ತಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ 7ನೇ ಆರೋಪಿ ಶ್ರೀಕಾಂತ್ ಮನೆಯನ್ನು ಜಾಲಾಡಿದ ಪೊಲೀಸರಿಗೆ ಲಕ್ಷ ಲಕ್ಷ ಕಂತೆ ಹಣ ಸಿಕ್ಕಿದೆ.

ಗುಡ್ಡೆಯಂಗಡಿಯಲ್ಲಿರುವ ಶ್ರೀಕಾಂತ್ ಮನೆಯ ಬಾಕ್ಸ್‌ನಲ್ಲಿ ಇಟ್ಟಿದ್ದ 41 ಲಕ್ಷ ರೂ. ನಗದು ಪತ್ತೆಯಾಗಿದೆ. ಅದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಶ್ರೀಕಾಂತ್ 10 ಲಕ್ಷ ರೂ. ಕೊಟ್ಟು ಜಮೀನು ಖರೀದಿ ಮಾಡಿದ್ದು, ಸುಮಾರು 70 ಲಕ್ಷ ರೂ. ಮೊತ್ತದ ಮನೆ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಚೈತ್ರಾ ಮತ್ತು 7 ಜನರ ಗ್ಯಾಂಗ್ ಬರೋಬ್ಬರಿ 5.50 ಕೋಟಿ ರೂ. ಪೀಕಿಸಿದೆ. ಟಿಕೆಟ್ ಸಿಗದೆ ಕಾಸು ಕಳೆದುಕೊಂಡ ಗೋವಿಂದ ಪೂಜಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚೈತ್ರಾ ಮತ್ತು ತಂಡ ಆ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ರ‍್ಯಾರಿಗೆ ಎಷ್ಟೆಷ್ಟು ಹಂಚಿದ್ದಾರೆ ಎಂದು ಇನ್ನಷ್ಟೇ ವಿಚಾರಗಳು ಬಹಿರಂಗ ಆಗಬೇಕಾಗಿದೆ. ಈ ನಡುವೆ ಚೈತ್ರಾಳ ಗೆಳೆಯ ಶ್ರೀಕಾಂತ್ ನಾಯಕ್ ಗುಡ್ಡೆಯಂಗಡಿಯಲ್ಲಿ ಜಮೀನು ಖರೀದಿಸಿ ಅದರಲ್ಲಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ ಎಂಬುದು ತಿಳಿದುಬಂದಿದೆ

Leave a Reply

Your email address will not be published. Required fields are marked *