ಬಂಟ್ವಾಳ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸರಪಾಡಿ ಬ್ಲಾಕ್ ಸಮಿತಿ ವತಿಯಿಂದ ಬ್ಲಾಕ್ ಸಮಾಗಮ-2023 ಸರಪಾಡಿ ಬ್ಲಾಕ್ ಅಧ್ಯಕ್ಷರಾದ ಉಸ್ಮಾನ್ ಕಾವಳಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ, ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೂನಿಷ್ ಆಲಿ, ಜೊತೆ ಕಾರ್ಯದರ್ಶಿಗಳಾದ ಅಶ್ರಪ್ ತಲಪಾಡಿ, ಮತ್ತು ಮುಬಾರಕ್ ಗೂಡಿನಬಳಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತನಾಡಿದ ದ. ಕ. ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಪಕ್ಷದ ತತ್ವ ಸಿದ್ದಾಂತವನ್ನು ಪ್ರತಿಯೊಂದು ಮನೆ ಮನಸ್ಸುಗಳಿಗೆ ತಲುಪಿಸಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ ಪಕ್ಷವನ್ನು ಬಲಿಷ್ಠಗೊಳಿಸಲು ನಾಯಕರು, ಕಾರ್ಯಕರ್ತರು ಪಣ ತೊಡಗಬೇಕೆಂದು ಕರೆನೀಡಿದರು.
ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ದ ಸಮಾರೋಪ ಭಾಷಣ ಮಾಡಿದರು.
ಸರಪಾಡಿ ಬ್ಲಾಕ್ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಕಾವಳಕಟ್ಟೆ ಸ್ವಾಗತಗೈದರು. ಕಾರ್ಯದರ್ಶಿ ಖಲೀಲ್ ಬಾಂಬಿಲ ಧನ್ಯವಾದಗೈದರು.