
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಸುರತ್ಕಲ್ ಬ್ಲಾಕ್ ಮಟ್ಟದ ನಾಯಕರ ಸಮಾಗಮ – 2023 ಕಾರ್ಯಕ್ರಮ ಚೊಕ್ಕಬೆಟ್ಟುವಿನಲ್ಲಿರುವ ಪಕ್ಷದ ನೂತನ ಕಚೇರಿಯಲ್ಲಿ ನಡೆಯಿತು.
ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ಸಲಾಂ ಕಾನ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು.




ಈ ಸಮಯ ಜಿಲ್ಲಾ ಸಮಿತಿ ಸದಸ್ಯರಾದ ಶಮೀಮ್ ನವರಂಗ್ ಹಳೆಯಂಗಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಪಕ್ಷದ ಪ್ರಸ್ತುತ ಕಾರ್ಯಚಟುವಟಿಕೆ ಹಾಗೂ ಭವಿಷ್ಯದಲ್ಲಿ ಪಕ್ಷದ ಬಗೆಗೆ ತೆಗೆದುಕೊಳ್ಳಬೇಕಾದ ಹಲವು ಯೋಜನೆಗಳ ಬಗೆಗೆ ಕಾರ್ಯಕರ್ತರಿಗಿರಬೇಕಾದ ಆಸಕ್ತಿ ಹಾಗೂ ಪ್ರಸ್ತುತ ನಾಯಕರ ಸಮಾಗಮ ಇದರ ಉದ್ದೇಶದ ಬಗ್ಗೆ ವಿವರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ ಜಮಾಲ್ ಜೋಕಟ್ಟೆಯವರು ಮಾತನಾಡಿ ಪಕ್ಷದ ಬಗ್ಗೆ ಕಾರ್ಯಕರ್ತರಿಗಿರಬೇಕಾದ ನಿಷ್ಠೆ, ಸಮಯಪಾಲನೆ, ಕಾರ್ಯತತ್ಪರತೆ, ರಾಜಕೀಯವಾಗಿ ಉತ್ಸುಕತೆ ಹಾಗೂ ಸಾಮಾಜಿಕವಾದ ಕಾಳಜಿಗಳ ಬಗ್ಗೆ ಸಂಕ್ಷಿಪ್ತವಾಗಿ ಬೋಧಿಸಿದರು ಹಾಗೂ ಅದರ ಬಗ್ಗೆ ಕಾರ್ಯಕರ್ತರು ತೆಗೆದುಕೊಳ್ಳಬೇಕಾದ ಅನಿವಾರ್ಯವಾದ ಭವಿಷ್ಯದಲ್ಲಿನ ಕೆಲವು ನಿರ್ಧಾರಗಳ ಬಗ್ಗೆ ನೆನಪಿಸಿದರು .
ನಂತರ ಪಕ್ಷದ ಸುತ್ತೋಲೆಯನ್ನು ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರರವರು ವರದಿ ಮಂಡಿಸಿದರು.
ಬ್ಲಾಕ್ ಕಾರ್ಯದರ್ಶಿ ಅರಫತ್ ಚೊಕ್ಕಬೆಟ್ಟು ಧನ್ಯವಾದಗೈದರು.
ಈ ಸಂಧರ್ಭದಲ್ಲಿ ಕ್ಷೇತ್ರ ಉಪಾಧ್ಯಕ್ಷರಾದ ನಾಸಿರ್ ಉಳಾಯಿಬೆಟ್ಟು, ಕ್ಷೇತ್ರ ಕಾರ್ಯದರ್ಶಿಗಳಾದ ನೂರುಲ್ಲ ಕುಳಾಯಿ, ಅಝರ್ ಚೊಕ್ಕಬೆಟ್ಟು, ಕ್ಷೇತ್ರ ಕೋಶಾಧಿಕಾರಿ ನೌಶಾದ್ ಚೊಕ್ಕಬೆಟ್ಟು, ಕ್ಷೇತ್ರ ಸಮಿತಿ ಸದಸ್ಯ ಫಯಾಝ್ ಕಾಟಿಪಳ್ಳ ಹಾಗೂ ಬ್ಲಾಕ್, ವಾರ್ಡ್ ಮತ್ತು ಬೂತ್ ನಾಯಕರು ಉಪಸ್ಥಿತರಿದ್ದರು.