ಉಳ್ಳಾಲ : ತಲಪಾಡಿ ಗ್ರಾಮದ ತಚ್ಚಣಿಯ ವಿಲೇಜ್ ಬಾರ್ ಬಳಿ ರಸ್ತೆ ಬದಿಯಲ್ಲಿ ಶುಕ್ರವಾರ ಸಂಜೆ ಮೋಟಾರು ಸೈಕಲಿನಲ್ಲಿ ಕುಳಿತು ನಿಷೇಧಿತ ಮಾದಕವಸ್ತು ಎಂಡಿಎಂಎಯನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರ ಕುರಿತಾಗಿ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ನಿರೀಕ್ಷಕರ ಮಾರ್ಗದರ್ಶನದಂತೆ ದಾಳಿ ನಡೆಸಿದ ಉಪ ನಿರೀಕ್ಷಕ ಧನ್ ರಾಜ್ ಹಾಗೂ ತಂಡ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ತ್ರಿಶೂರ್ ವಡಂಕಚೇರ್ ನ ಶೇಖ್ ತನ್ಸೀರ್(20)ಹಾಗೂ ವಡೆಗೆರ ಅಂಜೇರಿಯ ಸಾಯಿಕೃಷ್ಣ(19) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 2.77ಗ್ರಾಂ ತೂಕದ ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ವಿವೊ ಮೊಬೈಲ್ ಫೋನ್, ಯಮಹಾ ಮೋಟಾರ್ ಸೈಕಲ್ ಸೇರಿದಂತೆ ಸುಮಾರು 50ಸಾವಿರ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದು ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.