ಕರಾವಳಿಯಾದ್ಯಂತ ಸಮುದ್ರ ತೀರ ಸ್ವಚ್ಛತಾ ಅಭಿಯಾನ

ಸ್ವಚ್ಚ ಸಾಗರ ಸುರಕ್ಷಿತ ಸಾಗರಅಭಿಯಾನ ದೇಶದಾದ್ಯಂತ ಈಬಾರಿಯೂ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಪರ್ಯವರಣ ಸಂರಕ್ಷಣ ಮಂಗಳೂರು ಮಹಾನಗರ ಸಂಯೋಜಕ ,ನ್ಯಾಯವಾದಿ ಸತೀಶ ಮಹಿತಿನೀಡಿದ್ದಾರೆ.. ಪರ್ಯಾವರಣ ಸಂರಕ್ಷಣ ಗತಿ ವಿಧಿ ಮತ್ತು ಕರಾವಳಿ ಕಲ್ಯಾಣ ಪರಿಷತ್ತು ಸಂಯೋಜನೆಯಲ್ಲಿ ರೋಟರಿ/ಲಯನ್ಸ/ ಏನ್ ಸಿಸಿ ,ಎನ್ಎಸ್ಎಸ್ಜ್ಯ ಶಾಲಾ ಕಾಲೇಜುಗಳು ಒಟ್ಟಾಗಿ ಈ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ. ಪರ್ಯಾವರಣ ಗತಿ ವಿಧಿಯ ರಾಜ್ಯ ಸಂಯೋಜಕ ಜಯರಾಮ್ ಬೊಳ್ಳಾಜೆ ಸಾಗರದ ಸುರಕ್ಷೆ ಕುರಿತು ಮನೆಗಳಿಂದ ಏನು ಉಪಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿಯನ್ನು ನೀಡಿದರು.

ಮಂಗಳೂರಿನ ಕಮಿಷನರ್ ಮೇಯರ್, ಉಪಮೇಯರ್ ಸ್ವತಃ ಉಪಸ್ಥಿತರಿದ್ದು ಸಿಬ್ಬಂದಿಗಳೊಂದಿಗೆ ಸಹಕರಿಸಿದ್ದಾರೆ, ಕೋಸ್ಟ್ ಗಾರ್ಡ್ ಪೋಸ್ಟ್ ಗಾರ್ಡ್,ಸ್ಥಳೀಯ ಮೊಗವೀರ ಸಂಘಟನೆಗಳು,ಸಂಘ ಸಂಸ್ಥೆಯ ಕಾರ್ಯಕರ್ತರುಗಳು , ನೂರಕ್ಕೂ ಹೆಚ್ಚು ಸಂಘ ಸಂಸ್ಥೆಗಳ2000ಕ್ಕೂಮಿಕ್ಕಿ ಕಾರ್ಯಕರ್ತರು ಹಬ್ಬದ ಒತ್ತಡ ,ಸುರಿಯುವ ಮಳೆಯ ಮಧ್ಯದಲ್ಲೂ ತಮ್ಮಬ್ಯಾನರ್ಗಳೊಂದಿಗೆ ಭಾಗವಹಿಸಿ ಅಭಿಯಾನವನ್ನು ಕಾಳಜಿಯಿಂದ ನಡೆಸಿದ್ದಾರೆ ಎಂದರು.ಶೇಕಡ 60ರಷ್ಟು ಆಕ್ಸಿಜನ್ ಕೊಡುವ ಸಮುದ್ರದ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ ಆಗಬೇಕು .

ಮನೆಗೊಂದು ನರ್ಸರಿಯಾಗುವಂತೆ ಪ್ರತಿ ಮನೆಯಲ್ಲೂ ಕನಿಷ್ಠ 10 ಬೀಜಗಳನ್ನು ಸಂಗ್ರಹಿಸಿ ಬೀ ಜಾರೋಪಣಮಾಡಿ, ಮುಂದಿನ ದಿನಗಳಲ್ಲಿ ಆ ಸಸಿಗಳನ್ನು ನಮ್ಮ ಸುತ್ತಮುತ್ತ ನೆಟ್ಟು ಜಾಗತಿಕ ತಾಪಮಾನನ್ನು ತಡೆಯುವ ಪ್ರಯತ್ನ ಮಾಡಬೇಕು, ಪ್ಲಾಸ್ಟಿಕ್ ಬಳಸುವ ಬದಲು ಕೈಚೀಲದಲ್ಲಿ ವಸ್ತುಗಳನ್ನು ತರುವುದು ಸೇರಿದಂತೆ, ಪ್ಲಾಸ್ಟಿಕ್ ಬಳಕೆಯನ್ನು ಗಣನೀಯವಾಗಿ ನಿಯಂತ್ರಣಕ್ಕ್ ತರಬೇಕು ಎಂದು ಕರೆ ನೀಡಿದರು. ದೇಶದ 7,500 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಬಾರಿಯೂ ಸ್ವಯಂ ಪ್ರೇರಣೆಯಿಂದ ಸಮುದ್ರ ತೀರ ಸ್ವಚ್ಛತಾ ಅಭಿಯಾನ ನಡೆದಿರುವುದು ಬಹಳ ಆಶಾದಾಯಕ ವಾತಾವರಣ ಪರಿಸರದ ದೃಷ್ಟಿಯಿಂದ ಇದು ಅಭಿನಂದನೆಯ ಕಾರ್ಯ ಎಂದು ಎಲ್ಲರನ್ನೂ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *