August 30, 2025
WhatsApp Image 2023-09-20 at 2.27.43 PM

ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ 57 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬರಿಗೆ ಬಿಜೆಪಿ ನಾಯಕ ಮನಬಂದಂತೆ ಥಳಿಸಿರುವ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇಲ್ಲಿನ ಕೊತ್ವಾಲಿಯಿಂದ 8 ಕಿಲೋಮೀಟರ್ ದೂರದಲ್ಲಿರುವ ಗ್ರಾಮ ಪಂಚಾಯತ್ ಜಮುದಿ ಬಳಿ ಪಿಕಪ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ.

ಘಟನಾ ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಮತ್ತು ಅಧಿಕಾರಿ ಜಾಮುಂಡಿಯ ನಿವಾಸಿ ಜೈ ಗಣೇಶ್ ದೀಕ್ಷಿತ್ ಮೃತರ ಸಹಚರರನ್ನು ಮೃತರ ವಿವರಗಳನ್ನು ಕೇಳಿದರು. ಆದರೆ, ಅವರ ಸಹಚರರು ಆಘಾತಕ್ಕೊಳಗಾದ ಕಾರಣ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಇದರಿಂದ ಬಿಜೆಪಿ ಮುಖಂಡ ಸಾರ್ವಜನಿಕವಾಗಿ ಶೂನಿಂದ ಥಳಿಸಿದ್ದಾರೆ.

ಸಂತ್ರಸ್ತನಿಗೆ ಬೈಕ್‌ ಅಪಘಾತದ ಶಾಕ್‌ನಿಂದ ಏನನ್ನೂ ಹೇಳಲು ಸಾಧ್ಯವಾಗದ ಕಾರಣ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷ ಜೈ ಗಣೇಶ್ ದೀಕ್ಷಿತ್ ಅವರು ಸಾರ್ವಜನಿಕವಾಗಿ ಶೂಗಳಿಂದ ಹೊಡೆಯಲು ಪ್ರಾರಂಭಿಸಿದರು. ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

About The Author

Leave a Reply