Visitors have accessed this post 1154 times.

ಉಳ್ಳಾಲ: ಸೀರೆಯ ಸೆರಗು ಸ್ಕೂಟರಿನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟ ಮಹಿಳೆ ಸಾವು

Visitors have accessed this post 1154 times.

ಉಳ್ಳಾಲ: ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಸಹ ಸವಾರೆ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ರಾ.ಹೆ. 66ರ ಕಲ್ಲಾಪು ನಾಗನಕಟ್ಟೆಯ ಬಳಿ ನಿನ್ನೆ ರಾತ್ರಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಮಧೂರು, ಉಳಿಯ ನಿವಾಸಿ ಸುಮ ನಾರಾಯಣ ಗಟ್ಟಿ(51) ಮೃತಪಟ್ಟ ಮಹಿಳೆ, ಸುಮ ಅವರು ನಿನ್ನೆ ಮಧ್ಯಾಹ್ನ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ಕುಟಂಬದ ತರವಾಡು ಮನೆಯಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಯಂಕಾಲ ತಮ್ಮನ ಜತೆ ಸ್ಕೂಟರಿನಲ್ಲಿ ಜಪ್ಪಿನ ಮೊಗರುವಿಗೆ ತೆರಳಿ ಅಸೌಖ್ಯದಿಂದ ಬಳಲುತ್ತಿದ್ದ ದೊಡ್ಡಮ್ಮನ ಆರೋಗ್ಯ ವಿಚಾರಿಸಿ ಹಿಂತಿರುಗುತ್ತಿದ್ದರು. ನಿನ್ನೆ ರಾತ್ರಿ ರಾ.ಹೆ.66 ರ ಕಲ್ಲಾಪು ನಾಗನ ಕಟ್ಟೆಯ ಬಳಿ ಸುಮ ಸ್ಕೂಟರಿನಿಂದ ಕೆಳಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ. ಸುಮ ಅವರ ಸೀರೆಯ ಸೆರಗು ಸ್ಕೂಟರಿನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟಿರಬಹುದೆಂದು ಹೇಳಲಾಗುತ್ತಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತ ಸುಮ ಗಟ್ಟಿ ಅವರು ಮಧೂರಿನ ಗಟ್ಟಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಮೃತರು ಪತಿ, ಎರಡು ಹೆಣ್ಣು ಒಂದು ಗಂಡು ಮಗನನ್ನ ಅಗಲಿದ್ದಾರೆ.

Leave a Reply

Your email address will not be published. Required fields are marked *