August 30, 2025
WhatsApp Image 2023-09-25 at 6.12.20 PM

ಸವಣೂರು: ಕಡಬ ಸಮೀಪದ ಮರ್ಧಳಾ ಮಸೀದಿ ಮುಂಭಾಗ ನಿನ್ನೆ ರಾತ್ರಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಜೈಶ್ರೀರಾಂ ಘೋಷಣೆ ಕೂಗಿ ಅಶಾಂತಿ ಎಬ್ಬಿಸಲು ನಡೆಸಿದ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಸಮಿತಿ ಅಧ್ಯಕ್ಷ ರಝಾಕ್ ಕೆನರಾ ತೀವ್ರವಾಗಿ ಖಂಡಿಸಿದ್ದಾರೆ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಶಾಂತಿಯುತವಾಗಿ ಇರುವ ಈ ಪ್ರದೇಶದಲ್ಲಿ ಅನಾವಶ್ಯಕವಾಗಿ ಜೈಶ್ರೀರಾಂ ಎಂದು ಘೋಷಣೆ ಕೂಗಿ ಜನರನ್ನು ಪ್ರಚೋದಿಸಿ ಗಲಭೆ ಎಬ್ಬಿಸುವ ಹುನ್ನಾರವಾಗಿದೆ.ಅದಲ್ಲದೇ ಮೀಲಾದುನ್ನೆಬಿ ಕಾರ್ಯಕ್ರಮವೂ ನಡೆಯುವ ಈ ಸಮಯದಲ್ಲಿ ದುಷ್ಕರ್ಮಿಗಳು ಈ ರೀತಿಯಲ್ಲಿ ಮಸೀದಿ ಮುಂಭಾಗ ಬಂದು ಘೋಷಣೆ ಕೂಗಿರುವುದು ಆತಂಕಕಾರಿ ವಿಚಾರವಾಗಿದೆ. ಹಾಗಾಗಿ ಪೋಲಿಸ್ ಇಲಾಖೆ ಕೂಡಲೇ ಗಲಭೆ ಎಬ್ಬಿಸಲು ಪ್ರಯತ್ನಿಸಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ‌.

About The Author

Leave a Reply