ಮಂಗಳೂರು: ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿ ಮೈತ್ರಿಗೆ ಮುಸ್ಲಿಮರ ಮತದ ಅಗತ್ಯವಿಲ್ಲ ಎಂದಿದ್ದಾರೆ. ಮತೀಯವಾದವನ್ನೆ ಮುಂದಿಟ್ಟು ಕೋಮು ವಿದ್ವೇಶದ ರಾಜಕೀಯ ಮಾಡಿ ಅಧಿಕಾರ ಪಡೆಯಲು ಪ್ರಯತ್ನಿಸಿದ ತನ್ನ ಪಕ್ಷಕ್ಕೆ ಮುಸ್ಲಿಮರ ಮತದ ಅಗತ್ಯ ವಿಲ್ಲದಿದ್ದರೂ,ನಕಲಿ ಜಾತ್ಯತೀತ ಪದ ಅಗತ್ಯವಿರಬಹುದು.
ಇತ್ತೀಚೆಗೆ ಮುಸ್ಲಿಮರು ತನಗೆ ಮತ ಚಲಾಯಿಸದ ಕಾರಣ ನಾನು ಪರಾಜಿತ ನಾಗಿದ್ದೇನೆ ಎಂದು ಹಾಸನ ಜಿಲ್ಲೆಯ ಅಭ್ಯರ್ಥಿ ಹೇಳಿಕೆ ನೀಡಿದ್ದನ್ನು ಯತ್ನಾಳ್ ಮರೆತಿರಬೇಕು. ತನ್ನ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಮುಸ್ಲಿಮರ ಮತ ಬೇಡವಾದರೂ ಸೋಲಲು ಮುಸ್ಲಿಮರೇ ಕಾರಣ ಎಂದು ಒಪ್ಪಿಕೊಳ್ಳುವ ಸ್ಥಿತಿ ಶೋಚನೀಯ.
ಮುಸ್ಲಿಮರು ಮತ ಚಲಾಯಿಸದೆ ಇದ್ದ ಕಾರಣಕ್ಕಾಗಿ ನಾವು ಸೋತೆವು ಎಂದು ಇತ್ತೀಚೆಗೆ ಹೇಳಿಕೆ ನೀಡಿದ ಕುಮಾರ ಸ್ವಾಮಿಯ ಸ್ಥಿತಿ ಸದ್ಯದಲ್ಲೇ ಬಸವನ ಗೌಡ ಪಾಟೀಲ್ ಯತ್ನಾಳ್ ಗೆ ಬರುವ ಕಾಲ ದೂರವಿಲ್ಲ. ಆಗ ಯತ್ನಾಳ್ ನಕಲಿ ಜಾತ್ಯಾತೀತ ಪದದಿಂದ ತಿಪ್ಪರಲಾಗ ಹೊಡೆದು, ಅಸಲಿ ಜಾತ್ಯಾತೀತ ಮುಸ್ಲಿಮರ ಮತದ ಅಗತ್ಯ ನಮಗೆ ಇದೆ ಎಂದು ಹೇಳಿಕೆ ನೀಡಲೂಬಹುದು. ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.