Visitors have accessed this post 528 times.
ವಿಟ್ಲ: ಅಟೋ ಚಾಲಕನಿಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ. ವಿಟ್ಲ ಕಸಬ ಗ್ರಾಮ ಬಂಟ್ವಾಳ ನಿವಾಸಿ ಮಹಮ್ಮದ್ ಸುಹೈಲ್ ಎಂಬವರ ದೂರಿನಂತೆ, ದಿನಾಂಕ:27-09-2023 ರಂದು ರಾತ್ರಿ ಕಂಬಳಬೆಟ್ಟುವಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುವಾಗ ಸುಹೈಲ್ ಹಾಗೂ ಆರೋಪಿ ಹಾರೀಸ್ ರವರಿಗೂ ಮಾತುಕತೆಯಾಗಿರುತ್ತದೆ. ಪ್ರಕರಣ ಮುಂದುವರಿದಂತೆ ದಿನಾಂಕ:28-09-2023 ರಂದು ಬೆಳಿಗ್ಗೆ ಸುಹೈಲ್ ತನ್ನ ಅಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ತಲುಪಿದಾಗ ಆರೋಪಿ ಹಾರೀಸ್ ಎಂಬಾತನು ಆತನ ಅಟೋರಿಕ್ಷಾದಲ್ಲಿ ಅಶ್ರಫ್ ಉರಿಮಜಲು, ರಿಯಾಝ್ ಉರಿಮಜಲು ,ಅಚ್ಚುಕು ಕೊಲ್ಪೆ ರವರೊಂದಿಗೆ ಬಂದು ಸುಹೈಲ್ ರವರ ಅಟೊ ರಿಕ್ಷಾ ತಡೆದು ನಿಲ್ಲಿಸಿ ಅಟೋದಲ್ಲಿದ್ದ ಹಾರೀಸ್‌ಗೆ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಅಟೋರಿಕ್ಷಾದಲ್ಲಿದ್ದ ಕತ್ತಿ ಹಾಗೂ ದೊಣ್ಣೆಯನ್ನು ತೆಗೆದು ತೋರಿಸಿ ಬೆದರಿಕೆ ಹಾಕಿ ಹೋಗಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಹಾರೀಸ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಘಟನೆಗೆ ಸಂಬಧಿಸಿದಂತೆ ತನಿಖೆ ನಡೆಸಲಾಗುತ್ತಿದೆ.