ಪುತ್ತೂರು : ಮಸ್ಜಿದುಲ್ ಜಾಮಿಯಾ ಅಬೂಬಕ್ಕರ್ ಸಿದ್ದೀಕ್ ಮುಕ್ರಂಪಾಡಿ, ನಾಜುತುದ್ದರೈನ್ ಸ್ವಲಾತ್ ಕಮಿಟಿ, skssf ಮುಕ್ರಂಪಾಡಿ ಶಾಖೆ ಹಾಗೂ ಈದ್ ಮಿಲಾದ್ ಸಮಿತಿ ಮುಕ್ರಂಪಾಡಿ ಜಂಟಿ ಆಶ್ರಯದಲ್ಲಿ ಮರ್ಹೂಂ ಅಬ್ದುಲ್ ಖಾದರ್ ಹಾಜಿ ವೇದಿಕೆಯಲ್ಲಿ ಸೆಪ್ಟೆಂಬರ್ 26,27,28,ಮೂರು ದಿನಗಳ ಮಿಲಾದ್ ಸಮಾವೇಶ ಹಾಗೂ ರಾಜ್ಯ ಮಟ್ಟದ ದಫ್ಫ್ ಪ್ರದರ್ಶನ ನಡೆಯಿತು.
ಮೊದಲನೆ ದಿನ ಮಿಲಾದ್ ಸಮಾವೇಶ ವನ್ನು ಸಯ್ಯದ್ ಅಹ್ಮದ್ ಪೂಕೋಯ ತಂಗಳ್ ಉದ್ಘಾಟಿಸಿ, ದುಃಅ ಆಶೀರ್ವಚನ ಮಾಡಿದರು,ಜಮಾಹತ್ ಅಧ್ಯಕ್ಷರಾದ ಇಬ್ರಾಹಿಂ ಕೆ ಎಂ ಅಧ್ಯಕ್ಷತೆ ವಹಿಸಿ, ಸ್ಥಳೀಯ ಖತೀಬರು ಸಿದ್ದೀಕ್ ಫೈಝಿ ಪ್ರಸ್ತಾವಿಕ ಮಾಡಿದರು.
ವೇದಿಕೆಯಲ್ಲಿ ಸ್ಥಳೀಯ ಮದ್ರಸ ಉಸ್ತಾದ್ ಜಾಬೀರ್ ಉಮೈದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಲ್ ಟಿ ರಝಕ್ ಹಾಜಿ, ಅಝದ್ ಅಬ್ದುಲ್ ರಹಿಮಾನ್ ಹಾಜಿ ದರ್ಬೆ, ನಗರ ಸಭಾ ಸದಸ್ಯ ರಿಯಾಝ್ ವಲತ್ತಡ್ಕ, ಅಝೀಝ್ ಹಾಜಿ ಮೊಟ್ಟೆತ್ತಡ್ಕ, ಕಾಂಟ್ರಾಕ್ಟರ್ ಜುನೈದ್, ಉದ್ಯಮಿ ಫಾರೂಕ್ ಎಲ್ ಟಿ,ಅಬೂಬಕ್ಕರ್ ಮುಲಾರ್, ಉದ್ಯಮಿ ಆದಮ್ ಎಂ. ಎ ಮುಕ್ರಂಪಾಡಿ ಮುಂತಾದವರು ಭಾಗವಹಿಸಿದರು.
Sksssf ಶಾಖೆ ವತಿಯಿಂದ ಮಾಜಿ ಜಮಾಹತ್ ಸದಸ್ಯರನ್ನು ಸನ್ಮಾನ ಮಾಡಲಾಯಿತು.ಬಳಿಕ ರಾಜ್ಯಮಟ್ಟದ ಆಹ್ವಾನಿತ ದಫ್ಫ್ ತಂಡಗಳಿಂದ ದಫ್ಫ್ ಪ್ರದರ್ಶನ ನಡೆಯಿತು.
ಎರಡನೇ ದಿನ ಮೌಲೂದ್ ಪಾರಾಯಣ,ಮದ್ರಸ ಮಕ್ಕಳ ಮೆಹಫಿಲೆ ಮಿಲಾದ್ :2023 ಹಾಗೂ ಬುರ್ದಾ ಅಲಾಪಣೆ, ಬಹುಮಾನ ವಿತರಣೆ, ಸರ್ಟಿಫಿಕೇಟ್ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಕೊನೆಯ ದಿನ ದಾರುಸ್ಸಲಮ್ ದಫ್ಫ್ ತಂಡದಿಂದ ದಫ್ಫ್, SBV ವಿದ್ಯಾರ್ಥಿಗಳ ಸ್ಕೌಟ್ ಮೂಲಕ ಬ್ರಹತ್ ಮಿಲಾದ್ ಜಾಥಾ ಹಾಗೂ ಸಾರ್ವಜನಿಕ ಅನ್ನದಾನ ನಡೆಯಿತು.