Visitors have accessed this post 245 times.
ಕಾಸರಗೋಡು: ದುಬೈ ನಿಂದ ಊರಿಗೆ ಹೊರಟಿದ್ದ ಬದಿಯಡ್ಕದ ಯುವಕನೋರ್ವ ನಾಪತ್ತೆಯಾದ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.ವಿದ್ಯಾಗಿರಿ ಮುನಿಯೂರಿನ ಮುಹಮ್ಮದ್ ಸಿದ್ದೀಕ್ (28) ನಾಪತ್ತೆಯಾದವರು.
ಸಿದ್ದೀಕ್ ಸೆ.25 ರಂದು ಊರಿಗೆ ತಲಪುವುದಾಗಿ ಮನೆಯವರಿಗೆ ತಿಳಿಸಿದ್ದರು. ಅಂದು ಕೋಜಿಕ್ಕೋಡ್ ವಿಮಾನ ನಿಲ್ದಾಣ ದಲ್ಲಿ ಬಂದಿಳಿದ ಸಿದ್ದೀಕ್ ಮನೆಗೆ ತಲಪಿಲ್ಲ. ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ. ಅಂದು ರಾತ್ರಿ ಸಿದ್ದೀಕ್ ನನ್ನು ವಿಚಾರಿಸಿ ತಂಡವೊಂದು ಮನೆಗೆ ಬಂದಿದ್ದು, ಕೋಜಿ ಕ್ಕೋಡ್ ವಿಮಾನ ನಿಲ್ದಾಣ ದಲ್ಲಿ ಬಳಿಕ ಯಾರಾದರೂ ಅಪಹರಿಸಿದ್ದಾರೆ ಅಥವಾ ಬೇರೆ ಎಲ್ಲಿಗಾದರೂ ತೆರಳಿರ ಬಹುದೇ ಎಂಬ ಸಂಶಯ ಉಂಟಾಗಿದೆ.
ತಂದೆ ಯೂಸಫ್ ನೀಡಿ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.