August 30, 2025
WhatsApp Image 2023-09-30 at 1.51.36 PM

ಮಂಗಳೂರು : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ “ರಾಜಸ್ಥಾನ ಬೃಹತ್ ಮಾರಾಟ ಮೇಳ” ತಾ| 30 /09 / 2023, ಶನಿವಾರದಂದು ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್‌ಲ್ಯಾಂಡ್ಸ್‌ ನಲ್ಲಿ ಆರಂಭಗೊಂಡಿದೆ.
ಮೇಳದ ಆಯೋಜಕರಾದ ಮಹಾವೀರ್ ಜೈಪುರ್ ಅವರು ಉದ್ಘಾಟಿಸಿದರು.

ಈ ಗ್ರಾಮೀಣ ಮೇಳದಲ್ಲಿ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದ್ದು, ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್‌ಶೀಟ್‌ಗಳು, ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್‌ಶೀಟ್‌ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು.

ಮಾತ್ರವಲ್ಲದೇ ಜೋಧ್ಪುರ್ ಕರಕುಶಲ ಮರದ ಪಿಠೋಪರಣಗಳು, ಸಾರಂಗ್ಪುರ್ ಮರದ ಪಿಠೋಪರಣಗಳು, ಹೈದಾರ್ಬಾದ್ ಕಪ್ಪು ಮೇಟಲ್ನ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು, ನೀಲಿ ಬಣ್ಣದ ಕ್ರಾಕಾರಿ ಐಟಮ್ಗಳ ಬೃಹತ್ ಸಂಗ್ರಹ ಇಲ್ಲಿವೆ ಎಂದು ಮೇಳದ ಆಯೋಜಕರಾದ ಶ್ರೀ ಮಹಾವೀರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

About The Author

Leave a Reply