Visitors have accessed this post 387 times.
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೊಣಾಲು ಗ್ರಾಮದ ಪಾಂಡಿಬೆಟ್ಟು ಮನೆ ನಿವಾಸಿ, ಎಂಡೋ ಸಂತ್ರಸ್ತನಾಗಿದ್ದ ಹೃತಿಕ್ ಎಂಬ ಹನ್ನೆರಡು ವರ್ಷದ ಬಾಲಕ ಶನಿವಾರ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ತನ್ನನ್ನು ಕಾಡುತ್ತಿದ್ದ ಅನಾರೋಗ್ಯ ಉಲ್ಬಣಿಸಿ ಕಳೆದ 28 ದಿನಗಳಿಂದ ಮಂಗಳೂರಿನ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಶುಕ್ರವಾರ ಮನೆಗೆ ಹಿಂದಿರುಗಿದ್ದ, ಶನಿವಾರ ಆತ ಮೃತಪಟ್ಟನು. ಮೃತ ಬಾಲಕ ತಂದೆ, ತಾಯಿ, ಇಬ್ಬರು ತಮ್ಮಂದಿರನ್ನು ಅಗಲಿದ್ದಾರೆ.