Visitors have accessed this post 227 times.

ಮುಖ್ಯಮಂತ್ರಿ ಪದಕ ಪಡೆದ ಸುಬ್ರಹ್ಮಣ್ಯ ವಲಯದ ಉಪವಲಯಾರಣ್ಯಾಧಿಕಾರಿ

Visitors have accessed this post 227 times.

ಸುಬ್ರಹ್ಮಣ್ಯ: ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ನೀಡುವ ಮುಖ್ಯಮಂತ್ರಿ ಪದಕ ಸುಬ್ರಹ್ಮಣ್ಯ ವಲಯದ ಉಪವಲಯಾರಣ್ಯಾಧಿಕಾರಿ ಸಂತೋಷ್ ಶಿವಪ್ಪ ದಮ್ಮಸೂ‌ರು ಆಯ್ಕೆಯಾಗಿದ್ದಾರೆ.  ಸೆ.29 ರಂದು ಬೆಂಗಳೂರಿನ ವಿಧಾನ ಸೌದದ ಬ್ಲಾಕೆಂಟ್ ಹಾಲ್ ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಪದಕ ಪ್ರಧಾನ ಮಾಡಲಾಯಿತು.

ಕರ್ತವ್ಯ ಸಮಯದಲ್ಲಿ ಜಾತಿವಾರು ಸಸಿಗಳ ಸಂಖ್ಯೆಯಲ್ಲಿ ಕೆಲಜಾತಿಯ ಸಸಿಗಳು ವಿರಳವಾಗಿರುವುದನ್ನು ಗಮನಿಸಿ ಅವುಗಳ ಸಾಂದ್ರತೆಯನ್ನು ಹೆಚ್ಚಿಸುವ ಸಲುವಾಗಿ ಅವುಗಳ ಬೀಜಗಳನ್ನು ಹಾಗೂ ಕಾಡು ಸಸಿಗಳನ್ನು ಸ್ವ ಇಚ್ಚೆಯಿಂದ ತಂದು ಸಸ್ಯ ಕ್ಷೇತ್ರದಲ್ಲಿ ಪೋಷಿಸಿದ್ದರು.  ಅಭಿವೃದ್ದಿಪಡಿಸಿದ ನೆಡುತೋಪುಗಳಲ್ಲಿ ನೆಟ್ಟುಪೋಷಣೆ ಮಾಡಿ ಸದರಿ ಜಾತಿಯ ಸಸಿಗಳ ಸಂಶೋಧನೆ ಮತ್ತು ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಪದಕ ಆಯ್ಕೆಗೆ ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ.

 ಮೂಲತ: ಸವದತ್ತಿ ತಾಲ್ಲೂಕಿನ ಹಾರುಗೊಪ್ಪ ಗ್ರಾಮದವರಾದ ಇವರು  2009ರಲ್ಲಿ ಉಪ್ಪಿನಂಗಡಿ ವಲಯದ ಶಿರಾಡಿಯಲ್ಲಿ ಅರಣ್ಯ ರಕ್ಷಕರಾಗಿ ಕೆಲಸಕ್ಕೆ ಸೇರಿದ್ದರು.  2013ರಲ್ಲಿ ಪಂಜ ವಲಯಕ್ಕೆ ವರ್ಗಾವಣೆ ಗೊಂಡೂ ಬಳಿಕ 2000 ರಲ್ಲಿ  ಉಪ ಅರಣ್ಯಾಧಿಕಾರಿಯಾಗಿ ಬಡ್ತಿ ಗೊಂಡು 2021ರಲ್ಲಿ ಸುಬ್ರಹ್ಮಣ್ಯ ವಲಯದ ನೆಟ್ಟಣದ ಕೇಂದ್ರೀಯ ಮರಗಳ ಸಂಗ್ರಹಾಲಯದಲ್ಲಿ ಕರ್ತವ್ಯದಲ್ಲಿದ್ದಾರೆ.

Leave a Reply

Your email address will not be published. Required fields are marked *