ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ನಿನ್ನೆ ಸೌಹಾರ್ದ ಸಭೆ ನಡೆಯಿತು. ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಇದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಸರ್ವ ಧರ್ಮಗಳ ಮುಖಂಡರು ಭಾಗಿಯಾಗಿದ್ದರು.
ಶಿವಮೊಗ್ಗ ಸೌಹಾರ್ದವೇ ಹಬ್ಬ ಮತ್ತು ಶಾಂತಿ ನಡಿಗೆ ಸಮಿತಿ ಆಯೋಜನೆ ಮಾಡಿರುವ ಕಾರ್ಯಕ್ರಮ ಇದಾಗಿತ್ತು. ಈ ವೇಳೆ ನಗರದಲ್ಲಿ ಶಾಂತಿ ನೆಲೆಸಲು ಗಾಂಧಿ ಪ್ರತಿಮೆ ಮುಂದೆ ಸೌಹಾರ್ದಕ್ಕಾಗಿ ಸಂಕಲ್ಪ ಕೈಗೊಳ್ಳಲಾಯಿತು. ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಮೌಲಾನಿ ಅಬ್ದುಲ್ ಲತೀಫ್ ಮುಂತಾದ ಸರ್ವ ಧರ್ಮಗಳ ಮುಖಂಡರು ಭಾಗಿಯಾಗಿದ್ದರು.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಪಾಪ ಅವರು ಮನೆ ಮಠ ಬಿಟ್ಟು, ಹಬ್ಬ ಬಿಟ್ಟು ಕೆಲಸ ಮಾಡುತ್ತಾರೆ. ರಜೆ ಹಾಕದೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸುತ್ತಾರೆ. ಜನ ಕಾನೂನು ವಿರುದ್ಧವೇ ಹೋಗುತ್ತಾರೆ ಅಂದ್ರೆ ಯಾವ ಮಟ್ಟಿಗೆ ಅವರು ಬಂಡೆದ್ದು ಹೋಗಿದ್ದಾರೆ. ಕಾನೂನು ಕಾಯುವವರಿಗೆ ಬೆಲೆ ಇಲ್ಲ ಎಂದು ಆತಂಕ ವ್ತಕ್ತಪಡಿಸಿದರು.
ಶಿವಮೊಗ್ಗದ ಗಲಾಟೆಯಲ್ಲಿ 15 ರಿಂದ 20 ವರ್ಷದ ಯುವಕರು ಭಾಗಿಯಾಗುತ್ತಾರೆ. ಇದು ಆತಂಕಕಾರಿಯಾಗಿದೆ. ಕಾಲೇಜು ವಿದ್ಯಾರ್ಥಿಗಳ ಮೇಲೆ ಕಣ್ಣು ಇಡಬೇಕು. ತಂದೆ ತಾಯಿ ಮಕ್ಕಳ ಮೇಲೆ ಕಾಳಜಿ ವಹಿಸಬೇಕು ಎಂದರು.