
ಅಪರೂಪದಲ್ಲಿ ಅಪರೂಪವಾಗಿರುವ ಅವಳಿ ಜವಳಿ ಮಕ್ಕಳನ್ನು ನೋಡುವುದೇ ಒಂದು ಖುಷಿ. ಅದರಲ್ಲೂ ಒಂದೇ ಕಡೆ ಐದು ಜೊತೆ ಅವಳಿ ಮಕ್ಕಳು ನೋಡ ಸಿಗುತ್ತಾರೆ ಎಂದರೆ ಆಶ್ಚರ್ಯವೇ ಸರಿ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಒಂದೇ ಕ್ಲಾಸಿನಲ್ಲಿ 5 ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಇದೀಗ ಎಲ್ಲರ ಕಣ್ಣಾಗಿದ್ದಾರೆ.



ಇಲ್ಲಿನ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 5 ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಅಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾನ್ಹವಿ, ಫಾತಿಮತ್ ಕಮಿಲ-ಫಾತಿಮತ್ ಸಮಿಲ, ಆಯಿಷಾ ರೈಫಾ- ಫಾತೀಮಾ ರೌಲ, ದುಲೈಕತ್ ರುಫಿದಾ- ಹಲೀಮತ್ ರಾಫಿದ ಒಂದೇ ತರಗತಿಯಲ್ಲಿ ಕಲಿಯುತ್ತಿರುವ ಅವಳಿ ಜವಳಿ ವಿದ್ಯಾರ್ಥಿಗಳಾಗಿದ್ದು, ಐದು ಜೋಡಿ ಅವಳಿ ಮಕ್ಕಳಲ್ಲಿ ಒಂದು ಜೋಡಿ ಹಿಂದೂ ಸಮುದಾಯದ ಹಾಗೂ ಉಳಿದಂತೆ ನಾಲ್ಕು ಜೋಡಿ ಮಕ್ಕಳು ಮುಸ್ಲಿಂ ಸಮುದಾಯದಕ್ಕೆ ಸೇರಿದವರಾಗಿದ್ದಾರೆ.
ಆಶ್ಛರ್ಯ ಎಂಬಂತೆ ಒಂದೇ ಶಾಲೆಯ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವಳಿ ಜವಳಿ ಮಕ್ಕಳು ಹೆಚ್ಚಾಗಿ ರೂಪದಲ್ಲಿ ಮತ್ತು ಚಟುವಟಿಕೆಯಲ್ಲಿ ಒಂದೇ ಸಮನಾಗಿರುವುದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಲವೊಮ್ಮೆ ತಬ್ಬಿಬ್ಬಗುವ ಪ್ರಸಂಗಗಳು ನಡೆಯುತ್ತಿರುತ್ತದೆ. ಒಮ್ಮೊಮ್ಮೆ ಸಹಪಾಠಿಗಳು ಪೂಲ್ ಆಗುವ ಸಂದರ್ಭಗಳು ಕೂಡ ಬಂದಿವೆಯಂತೆ.