ರಾಜ್ಯ ಮಟ್ಟದ 4 ನೇ ರಾಯ್ಯಕಿಂಗ್ ಮುಹಮ್ಮದ್ ಶಾಮೀಲ್ ಅರ್ಷದ್ ಗೆ 4 ಚಿನ್ನದ ಪದಕ ಹಾಗೂ ವೈಯಕ್ತಿಕ ಚಾಂಪಿಯನ್.

ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ (ರಿ ‌) ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 02 ರ ವರೆಗೆ ರಾವ್ಸ್ ಸ್ಕೇಟಿಂಗ್ ಅಕಾಡೆಮಿ ಮೈಸೂರಿನಲ್ಲಿ ಆಯೋಜಿಸಿದ 4ನೇ ರಾಜ್ಯ ಮಟ್ಟದ ರಾಯ್ಯ ಕಿಂಗ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ 14-17 ವರ್ಷದ ಬಾಲಕರ ಇನ್ ಲೈನ್ ವಿಭಾಗದಲ್ಲಿ 500+D ರಿಂಕ್ ರೇಸ್ ನಲ್ಲಿ ಚಿನ್ನದ ಪದಕ, 200 ಮೀಟರ್ ಡ್ಯುಯಲ್ ಟಿ.ಟಿ ನಲ್ಲಿ ಚಿನ್ನದ ಪದಕ, ಒನ್ ಲ್ಯಾಪ್ ರೋಡ್ ರೇಸ್ ನಲ್ಲಿ ಚಿನ್ನದ ಪದಕ, 100 ಮೀಟರ್ ರೋಡ್ ರೇಸ್ ನಲ್ಲಿ ಚಿನ್ನದ ಪದಕ. 4 ಚಿನ್ನದ ಪದಕವನ್ನು ಗಳಿಸಿ ವೈಯಕ್ತಿಕ ಚಾಂಪಿಯನ್ ಆಗಿರುತ್ತಾರೆ.

ಇವರು ಯೇನಪೋಯ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ಹೈ ಫೈ ರ್ಯಸ್ ಸ್ಕೇಟಿಂಗ್ ಕ್ಲಬ್ ನ ‌ಸದಸ್ಯನಾಗಿರುವ ಶಾಮೀಲ್ ಹ್ಮೋಗೆಬ್ಬೈಲ್ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿ ಯಲ್ಲಿ ಮೋಹನ್ ದಾಸ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಅರ್ಷದ್ ಹುಸೇನ್ ಹಾಗೂ ರಂಲತ್ ಅರ್ಷದ್ ದಂಪತಿಯ ಪುತ್ರನಾಗಿದ್ದಾರೆ

Leave a Reply