November 8, 2025
WhatsApp Image 2023-10-06 at 3.50.23 PM

ಮಂಗಳೂರು: ಶಿವಮೊಗ್ಗದ ಈದ್ ಮಿಲಾದ್ ಗಲಭೆ ಪೂರ್ವನಿಯೋಜಿತ ಕೃತ್ಯ. ಇದರ ಹಿಂದೆ ಮುಸ್ಲಿಂ ಮಹಿಳೆಯರ ಕೈವಾಡವಿರುವುದು ಗಂಭೀರವಾದ ಸಂಗತಿ ಎಂದು ವಿಎಚ್ ಪಿ ಮಂಗಳೂರು ವಿಭಾಗ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು. ಈದ್ ಮಿಲಾದ್ ಮೆರವಣಿಗೆ ಶನೀಶ್ವರ ದೇವಸ್ಥಾನಕ್ಕೆ ಬರುತ್ತಿದ್ದಂತೆ ಅಲ್ಲಿದ್ದ ನಾಲ್ಕೈದು ಮುಸ್ಲಿಂ ಮಹಿಳೆಯರು ಕಲ್ಲುತೂರಾಟವಾಗಿದೆ ಎಂದು ಬೊಬ್ಬೆ ಹಾಕಿದ್ದಾರೆ‌. ಇದೇ ಕಾರಣದಿಂದ ಪ್ರಚೋದನೆಗೊಂಡು ಹತ್ತಿಪ್ಪತ್ತು ಹಿಂದೂ ಮನೆಗಳಿಗೆ ದಾಳಿಯಾಗಿದೆ. ಇದೊಂದು ಮುಸ್ಲಿಂ ದಂಗೆಕೋರರ ಕೃತ್ಯ. ಆದ್ದರಿಂದ ಶಿವಮೊಗ್ಗ ಗಲಭೆ ಪ್ರಕರಣವನ್ನು ಎನ್ಐಎಯಿಂದ ತನಿಖೆ ಮಾಡಿಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು ಸರಕಾರ ಹಾಗೂ ಪೊಲೀಸ್ ಇಲಾಖೆಗೆ ಆಗ್ರಹಿಸುತ್ತೇನೆ ಎಂದರು. ಶಿವಮೊಗ್ಗದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡನೀಯ. ಇಲ್ಲಿ ಹಿಂದೂಗಳು ಭಯಭೀತರಾಗಿದ್ದಾರೆ‌. ಆದ್ದರಿಂದ ಈ ಘಟನೆಯನ್ನು ವಿಎಚ್ ಪಿ ಗಂಭೀರವಾಗಿ ತೆಗೆದುಕೊಂಡಿದೆ‌. ಈ ದಾಳಿಯನ್ನು ನಿಲ್ಲಿಸಬೇಕಾದರೆ ಉತ್ತರ ಭಾರತ, ಉತ್ತರಖಾಂಡ ಮಾದರಿಯ ಮಹಾ ಪಂಚಾಯತ್ ಅನ್ನು ವಿಎಚ್ ಪಿ ಶಿವಮೊಗ್ಗದಲ್ಲೂ ಕರೆಯಲು ಚಿಂತನೆ ನಡೆಸಿದೆ. ಹಿಂದೂ ಮುಖಂಡರು, ಜಾತಿ ಪ್ರಮುಖರು, ಸಾಧುಸಂತರು ಮತ್ತು ಸಮಾಜದ ಗಣ್ಯರನ್ನು ಈ ಮಹಾಪಂಚಾಯತ್ ನಡೆಸಲಾಗುತ್ತದೆ. ಇದರ ಮೂಲಕ ಮುಸ್ಲಿಂ ದಂಧೆಕೋರರಿಗೆ ಉತ್ತರವನ್ನು ನೀಡಲಾಗುತ್ತದೆ ಎಂದರು. ಮೈಸೂರು ಮಾದರಿಯ ಮಹಿಷ ದಸರಾವನ್ನು ಉಡುಪಿಯಲ್ಲಿ ಮಾಡಲಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿದೆ. ಮೈಸೂರಿನಲ್ಲಿಯೇ ವಿರೋಧಿಸುತ್ತಿರುವ ಮಹಿಷ ದಸರಾ ಮಾಡೋದು ಉಡುಪಿಯಲ್ಲೂ ಮಾಡೋದು ಸಮಂಜಸವಲ್ಲ. ವಿಎಚ್ ಪಿ ಇದನ್ನು ಬಲವಾಗಿ ವಿರೋಧಿಸುತ್ತದೆ. ಉಡುಪಿಯಲ್ಲಿ ಯಾರಾದರೂ ಮಹಿಷ ದಸರಾವನ್ನು ಮಾಡಲು ಪ್ರಯತ್ನಪಟ್ಟರೆ ಅದನ್ನು ವಿರೋಧಿಸುತ್ತೇವೆ‌. ಯಾವುದೇ ಕಾರಣಕ್ಕೆ ಅದನ್ನು ಮಾಡಲು ಬಿಡೋಲ್ಲ‌ ಎಂದು ಶರಣ್ ಪಂಪ್ ವೆಲ್ ಹೇಳಿದರು.

About The Author

Leave a Reply