ಬಜಪೆ: ಚತುಷ್ಪಥ ರಸ್ತೆ ಕಾಮಗಾರಿಯೂ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಬಜಪೆ ಪರಿಸರದ ನಾಗರಿಕರು ಕಾಮಗಾರಿಗೆ ತಡೆ ಒಡ್ಡಿದ್ದಾರೆ.
ನಾವೂ ಹಲವು ಬಾರಿ ರಸ್ತೆ ಕಳಪೆಯಾಗಿದೆ ಎಂದು ವೈಯಕ್ತಿಕವಾಗಿ ಹಾಗೂ ಬೇರೆ ಬೇರೆ ಪಕ್ಷ ಸಂಘಟನೆಗಳ ಹೆಸರಲ್ಲಿ ಮನವಿ ಸಲ್ಲಿಸಿದರು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಕೊಡುತ್ತಿಲ್ಲ ಅದಕ್ಕಾಗಿ ಇಂದು ಕಾಮಗಾರಿಯನ್ನು ತಡೆದು ಪ್ರತಿಭಟಿಸಬೇಕಾಯಿತು ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಮದನಿ ಆರೋಪಿಸಿದರು.
ವೇದಿಕೆಯ ಸಂಚಾಲಕ ಇಸ್ಮಾಯಿಲ್ ಇಂಜಿನಿಯರ್ ರವರು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಕಾಮಗಾರಿಯು ಕಳಪೆಯಿಂದ ಕೂಡಿದೆ. ತಕ್ಷಣಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಕೂಡಲೇ ಸಮಸ್ಯೆ ಇತ್ಯರ್ಥ ಪಡಿಸಬೇಕು. ಇತ್ಯರ್ಥವಾಗದಿದ್ದಲ್ಲಿ ನಾವೂ ಬಜಪೆ ನಾಗರಿಕರನ್ನು ಸೇರಿಸಿ ಜಿಲ್ಲಾಧಿಕಾರಿ ಕಛೇರಿ ಬಳಿ ಬ್ರಹತ್ ಪ್ರತಿಭಟನೆ ಅಯೋಜಿಸಲಿದ್ದೇವೆ ಎಂದು ಹೇಳಿದರು.
ಇದೇ ವೇಳೆಯಲ್ಲಿ ಕಾಮಗಾರಿ ತಡೆದು ಪ್ರತಿಭಟಿಸುವ ವಿಷಯ ತಿಳಿದ ಗುತ್ತಿಗೆದಾರರು ರಾತ್ರೋರಾತ್ರಿ ಕಾಮಗಾರಿಗೆ ಬಳಸುವ ಯಂತ್ರಗಳೊಂದಿಗೆ ಪರಾರಿಯಾಗಿದ್ದಾರೆ.
ಈ ಸಂಧರ್ಭದಲ್ಲಿ ಅಥಾವುಲ್ಲಾ ಜೋಕಟ್ಟೆ, ಖಾದರ್ ಏರ್ಪೋರ್ಟ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ದೇವದಾಸ್, ನಿಸಾರ್ ಕರಾವಳಿ, ಹಿರಿಯರಾದ ಥಾಮಸ್, ಮೋನಾಕ ಸಲೀಲ್ ಡಿಲಕ್ಸ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಜಾಕೊಬ್ ಪಿರೇರಾ ಹಾಗೂ ನಝೀರ್ ಕಿನ್ನಿಪದವು , ರಹೀಂ ಕಳವಾರು, ಇರ್ಷಾದ್ ಬಜ್ಪೆ, ಅನ್ವರ್ ಬಜ್ಪೆ ಹಾಗೂ ಹಲವಾರು ಬಜಪೆ ನಾಗರಿಕರು ಉಪಸ್ಥಿತರಿದ್ದರು.