Visitors have accessed this post 714 times.

ಬೆಳ್ತಂಗಡಿ: ಪತ್ನಿಯನ್ನು ಕೊಂದು ಆತ್ಮಹತ್ಯೆಯಂದು ನಾಟಕವಾಡಿದ ಗಂಡ- ಅರೆಸ್ಟ್

Visitors have accessed this post 714 times.

ಬೆಳ್ತಂಗಡಿಯ ಉಜಿರೆಯ ಬಾವಿಯಲ್ಲಿ ಸಿಕ್ಕ ವಿವಾಹಿತ ಮಹಿಳೆಯ ಶವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ ಹೆಂಡತಿಯನ್ನೇ ಗಂಡ ಬಾವಿಗೆ ತಳ್ಳಿ ಕೊಲೆ ಮಾಡಿದ್ದ ಎಂದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದ್ದು ಆರೋಪಿ ಸುಧಾಕರನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಾಲು ಗ್ರಾಮದಲ್ಲಿ ಈ ಪ್ರಕೃಣ ನಡೆದಿದ್ದು ಶುಕ್ರವಾರ ವಿವಾಹಿತ ಮಹಿಳೆ ಶಶಿಕಲರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಭಾವಿಸಲಾಗಿತ್ತು. ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸ್ಥಳೀಯರು ಹೇಳಿದ್ದರು. ಆದರೆ, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹವನ್ನು ಹೊರತೆಗೆದು ಪರಿಶೀಲನೆ ಮಾಡಿದ್ದರು. ನಂತರ ಸಾವಿಗೆ ಕಾರಣವೇನೆಂದು ತನಿಖೆ ಮಾಡಿದಾಗ ಗಂಡನೇ ತನ್ನ ಹೆಂಡತಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದ ಎಂಬುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಮದುವೆಯಾಗಿ ಮಕ್ಕಳಿದ್ದರೂ ತನ್ನ ಗಂಡ ಬೇರೊಂದು ಯುವತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದನ್ನು ಪ್ರಶ್ನಿಸಿದ ಪತ್ನಿ ಶಶಿಕಲ ಮೇಲೆ ಆರೋಪಿ ಗಂಡ ಸುಧಾಕರ ಹಲ್ಲೆ ಮಾಡಿ, ನಂತರ ಬಾವಿಗೆ ತಳ್ಳಿದ್ದ ಎಂಬುದು ಇದೀಗ ತನಿಖೆಯಿಂದ ಬಯಲಾಗಿದೆ. ಆರೋಪಿ ಸುಧಾಕರನನ್ನು ಪೊಲೀಸರು ಬಂಧಿಸಿದ್ದಾರೆ.ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸುಧಾಕರ್‌ ಹಾಗೂ ಶಶಿಕಲಾ ಕಳೆದ 7 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿದ್ದರು. ಮೊದಲು ಮನೆಯವರ ವಿರೋಧವಿದ್ದರೂ, ಅವರನ್ನು ಒಪ್ಪಿಸಿ ಮದುವೆಯೂ ಆಗಿದ್ದರು. ಆರಂಭದಲ್ಲಿ ಸುಖವಾಗಿ ಸಂಸಾರ ಮಾಡಿಕೊಂಡಿದ್ದ ದಂಪತಿಗೆ ಒಂದು ವರ್ಷದಲ್ಲಿಯೇ ಹೆಣ್ಣು ಮಗು ಜನಿಸಿತ್ತು. ಆದರೆ, ಕಳೆದೊಂದು ವರ್ಷದಿಂದ ಗಂಡನಿಗೆ ಮತ್ತೆ ಯುವತಿಯರ ಶೋಕಿ ಶುರುವಾಗಿತ್ತು. ಹೀಗಾಗಿ, ಮದುವೆಯಾಗಿ ಮನೆಯಲ್ಲಿ ಮಡದಿ ಹಾಗೀ 6 ವರ್ಷದ ಮಗಳಿದ್ದರೂ ಬೇರೊಂದು ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು ಇದೇ ಕಾರಣಕ್ಕೆ ಆಗಾಗ ಇಬ್ಬರ ಮಧ್ಯೆ ಜಗಳವೂ ಆಗುತ್ತಿತ್ತು. ಶುಕ್ರವಾರವೂ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಆಗ ಗಂಡ ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾನೆ. ಆದರೆ, ಆಕೆ ಸಾವನ್ನಪ್ಪದೇ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಗ ತನ್ನ ಹೆಂಡತಿಯದ್ದು ಆತ್ಮಹತ್ಯೆ ಎಂದು ಬಿಂಬಿಸುವ ದೃಷ್ಟಿಯಿಂದ ಪ್ರಜ್ಞೆ ತಪ್ಪಿದ್ದ ಹೆಂಡತಿಯನ್ನು ಎತ್ತಿಕೊಂಡು ಹೋಗಿ ಮನೆಯ ಬಳಿಯ ಬಾವಿಗೆ ತಳ್ಳಿದ್ದಾನೆ.ನಂತರ ಕೊಲೆ ಆರೋಪ ತನ್ನ ಮೇಲೆ ಬರಬಾರದೆಂದು ಸ್ಥಳದಿಂದ ಪರಾರಿ ಆಗಿದ್ದರೂ ಬಳಿಕ ಪೊಲೀಸರು ಬಂಧಿಸಿದ್ದಾರೆ.ಧರ್ಮಸ್ಥಳ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *