Visitors have accessed this post 667 times.

ರಾಜ್ಯದ ಯಜಮಾನಿಯರಿಗೆ ‘ಗುಡ್ ನ್ಯೂಸ್’ : ಈ ದಿನ ಖಾತೆಗೆ `ಗೃಹಲಕ್ಷ್ಮಿ’ 2 ನೇ ಕಂತಿನ ಹಣ ಜಮಾ

Visitors have accessed this post 667 times.

ಬೆಂಗಳೂರು: 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಹಣದ ಮೊದಲ ಕಂತನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಇದರ ಲಾಭವನ್ನು ಪಡೆದುಕೊಂಡು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ 2 ನೇ ಕಂತಿನ ಹಣ ಅಕ್ಟೋಬರ್ 2 ನೇ ವಾರದಲ್ಲಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಮೊದಲ ಕಂತಿನ ಹಣವನ್ನು ಪಡೆದುಕೊಳ್ಳದೇ ಇರುವವರು ತಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಜೋಡಣೆಯನ್ನು ಸರಿಯಾಗಿ ಮಾಡಿಸಿಕೊಳ್ಳಬೇಕಾಗಿದ್ದು, ಇದಾದ ಬಳಿಕ ಅವರಿಗೆ ಎರಡು ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು ಅಂತ ತಿಳಿದು ಬಂದಿದೆ.

ಈ ನಡುವೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಇದುವರೆಗೆ ಶೇ. 86 ರಷ್ಟು ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಸರ್ಕಾರದ ಪ್ರಕಾರ ಗೃಹಲಕ್ಷ್ಮಿ ಯೋಜನೆಗೆ ರಾಜ್ಯಾದ್ಯಂತ 1.28 ಕೋಟಿ ಫಲಾನುಭವಿಗಳಿದ್ದಾರೆ. ಈ ಪೈಕಿ ಈಗಾಗಲೇ 1.10 ಕೋಟಿಗೂ ಅಧಿಕ ಮಹಿಳೆಯರು ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್ ತಿಂಗಳಿಂದಲೇ ಮನೆಯ ಯಜಮಾನಿಗೆ ಹಣ ಸಂದಾಯವಾಗಿದೆ.

Leave a Reply

Your email address will not be published. Required fields are marked *