Visitors have accessed this post 478 times.

ಅ.18 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ ಮತ್ತು ಅಭಿನಂದನಾ ಸಮಾವೇಶ

Visitors have accessed this post 478 times.

ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್18 ರಂದು ದ‌.ಕನ್ನಡ ಅಲ್ಪಸಂಖ್ಯಾತ ಘಟಕದ ವತಿಯಿಂದ ನಡೆಯಲಿರುವ ಅಭಿನಂದನಾ ಸಮಾರಂಭ ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶದ ಪೂರ್ವಭಾವಿ ಸಭೆಯು ಬಿ.ಸಿ.ರೋಡ್ ಕಾಂಗ್ರೆಸ್ ಕಛೇರಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಪಾಣೆಮಂಗಳೂರು-ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಂಟಿಯಾಗಿ ನಡೆಯಿತು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಶ್ರೀ ಸುಧೀಪ್ ಕುಮಾರ್ ಶೆಟ್ಟಿ ಅದ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತಾಡಿ ಅಲ್ಪಸಂಖ್ಯಾತ ಘಟಕದ ವತಿಯಿಂದ ಕಾರ್ಯಕ್ರಮ ಆಯೋಜಿಸಿದ್ದರೂ ಇದು ಪಕ್ಷದ ಕಾರ್ಯಕ್ರಮವಾಗಿದೆ,ಇದರಲ್ಲಿ ನಮ್ಮ ವಿಧಾನ ಸಭಾ ಕ್ಚೇತ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ವಿನಂತಿಸಿದರು.

ದಕ್ಷಿಣ ಕನ್ನಡ ಅಲ್ಪಸಂಖ್ಯಾತ ಘಟಕದ ಜಿಲ್ಲಾದ್ಯಕ್ಷರಾದ ಕೆ.ಕೆ.ಶಾಹುಲ್ ಹಮೀದ್ ಮಾತಾಡಿ ಮುಂಬರುವ ಲೋಕಸಭಾ, ಜಿ.ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವುದರಿಂದ ಚುನಾವಣಾ ತಯಾರಿಯೊಂದಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಅಲ್ಪಸಂಖ್ಯಾತ ಘಟಕದ ವತಿಯಿಂದ ಜಿಲ್ಲಾ ಸಮಾವೇಶವನ್ನು ಆಯೋಜಿಸಿದ್ದೇವೆ.ಇದು ಬರೀ ಒಂದು ವರ್ಗದ ಸಮಾವೇಶಕ್ಕೆ ಸೀಮಿತವಾಗದೆ ಪಕ್ಷದ ಎಲ್ಲಾ ಕಾರ್ಯಕರ್ತರು ಬಾಗವಹಿಸುವಂತೆ ತಿಳಿಸಿದರು.ಕೇಂದ್ರದ ಮಾಜಿ ಸಚಿವರಾದ ಜಾಫರ್ ಶರೀಪ್ ನಂತರ AICCಯ CWC ಯಲ್ಲಿ ಖಾಯಂ ಸದಸ್ಯತ್ವ ಹೊಂದಿರುವ ಹಾಗೂ ಜೆ.ಎನ್.ಯು ವಿದ್ಯಾರ್ಥಿ ಸಂಘಟನೆಯ ಅದ್ಯಕ್ಷರಾಗಿ ತಳಮಟ್ಟದಿಂದಲೇ ಯಾವುದೇ ಗಾಡ್ ಪಾದರ್ ಗಳಿಲ್ಲದೆ ಪಕ್ಷ ಸಂಘಟಿಸಿ ಇದೀಗ ಮುಸ್ಲಿಂ ನಾಯಕತ್ವದಲ್ಲಿ ಮುಂಚೂಣಿ ನಾಯಕರಾಗಿರುವ ರಾಜ್ಯಸಭಾ ಸದಸ್ಯ ಡಾ| ನಾಸೀರ್ ಹುಸೇನ್ ಮತ್ತು ಕೆ.ಪಿ.ಸಿ.ಸಿ ಕಾರ್ಯದ್ಯಕ್ಷರೂ,ವಿಧಾನ ಪರಿಷತ್ ಮುಖ್ಯಸಚೇತಕರಾಗಿರುವ ಸಲೀಂ ಆಹ್ಮದ್ ಇಬ್ಬರು ನಾಯಕರುಗಳಿಗೆ
ಈ ಸಮಾವೇಶದಲ್ಲಿ ಅಭಿನಂದನಾ ಸಮಾರಂಭ ಎರ್ಪಡಿಸಲಾಗಿದೆ ಎಂದರು.ಅಲ್ಲದೆ ಈ ಕಾರ್ಯಕ್ರಮವು 10 ಗಂಟೆಗೆ ಆರಂಭಗಳೊಳ್ಳಲಿದ್ದು, ಅದ್ಯಕ್ಷತೆಯನ್ನು ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ರಾಜ್ಯಾದ್ಯಕ್ಷರಾದ MLC ಅಬ್ದುಲ್ ಜಬ್ಬಾರ್ ಖಾನ್ ವಹಿಸಲಿದ್ದಾರೆ‌.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್,ಉಡುಪಿ ಜಿಲ್ಲಾ ಉಸ್ತುವಾರಿಗಳು ಮಹಿಳಾ ಮತ್ತು ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಲ್ಕರ್,ಮಾಜಿ ಸಚಿವರಾದ ರಮನಾಥ ರೈ,ವಿಧಾನ ಪರಿಷತ್ ಸದಸ್ಯರುಗಳಾದ ಹರೀಶ್ ಕುಮಾರ್,ಮಂಜುನಾಥ ಭಂಡಾರಿ ಸಹಿತ ವಿವಿಧ ಘಟಕದ ಜಿಲ್ಲಾದ್ಯಕ್ಷರು,ಮಾಜಿ ಶಾಸಕರು, ಮುಂಚೂಣಿ ಘಟಕದ ನಾಯಕರು ಬ್ಲಾಕ್ ಅದ್ಯಕ್ಷರುಗಳು ಬಾಗವಹಿಸಲಿದ್ದಾರೆ.ಸಮಾವೇಶದಲ್ಲಿ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿದ್ದು ಉಟೋಪಚಾರ,ವಾಹನ ನಿಲುಗಡೆಗೆ ಇತ್ಯಾದಿಗಳು ಅಚ್ಚುಕಟ್ಟಾಗಿ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಬೇಬಿ ಕುಂದರ್,ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾದ್ಯಕ್ಷರಾದ ಅಬ್ಬಾಸ್ ಅಲಿ,ಪಾಣೆಮಂಗಳೂರು ಯೂತ್ ಕಾಂಗ್ರೆಸ್ ಅದ್ಯಕ್ಷರಾದ ಇಬ್ರಾಹಿಂ ನವಾಜ್,ST ಘಟಕದ ಜಿಲ್ಲಾದ್ಯಕ್ಷರಾದ ನಾರಾಯಣ ನಾಯ್ಕ್,ಪಾಣೆಮಂಗಳೂರು ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅದ್ಯಕ್ಷರಾದ ಸಂದೇಶ್ ಶೆಟ್ಟಿ ಬಿಕ್ನಾಜೆ ಸಹಿತ ಇನ್ನಿತರರು ಉಪಸ್ಥಿತರಿದ್ದರು.

ಸಮಾವೇಶದ ಪೂರ್ವಭಾವಿ ಸಭೆಯ ಸಂಘಟಕರು,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅದ್ಯಕ್ಷರಾದ ಅರ್ಶದ್ ಶರವು ಸ್ವಾಗತಿಸಿ ಬ್ಲಾಕ್ ಅದ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಸಭೆಯಲ್ಲಿ ಸೇರಿದ ನಾಯಕರುಗಳಿಗೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.‌

Leave a Reply

Your email address will not be published. Required fields are marked *