
ಬಜಪೆ:ಬಜಪೆ ಪೊಲೀಸ್ ಠಾಣೆಯ ವ್ಯಾಪ್ತಿಯ ಕೆಂಜಾರು ಗ್ರಾಮದ ಪೋರ್ಕೊಡಿ,ಕೊಳಂಬೆ ಫನಾ ಕಾಲೇಜು ಬಳಿ ಹಾಗೂ ಕಂದಾವರ ಗ್ರಾಮದ ಅದ್ಯಪಾಡಿ ದ್ವಾರದ ಬಳಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಐವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪೋರ್ಕೊಡಿ ನಿವಾಸಿ ಮೊಹಮ್ಮದ್ ಮುನಾಜ್, ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಆಫ್ರಾರ್, ಬಡಗುಳಿಪಾಡಿ ಗ್ರಾಮದ ನಿವಾಸಿ ರಾಹಿಲ್ ಮೊಯಿದ್ದೀನ್ ಶರೀಫ್, ಮೂಡುಪೆರಾರ ಗ್ರಾಮದ ಗುರುಕಂಬಳದ ನಿವಾಸಿ ಮುಲ್ಲಾ ಅಬ್ದುಲ್ ಅಮನ್ ಮತ್ತು ಕಂದಾವರ ಗ್ರಾಮದ ಅಮಾನುಲ್ಲಾ ಕಂಪೌಂಡ್ ನಿವಾಸಿ ಮೊಹಮ್ಮದ್ ಶಾಹಿನ್ ಎಂದು ಗುರುತಿಸಲಾಗಿದೆ. ಪೊಲೀಸರುಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪರೀಕ್ಷಿಸಿದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುದರಿಂದ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ನಗರವನ್ನು ಮಾದಕ ವಸ್ತು ಮುಕ್ತ ನಗರವನ್ನಾಗಿ ಮಾಡಲು ದೃಢನಿರ್ಧಾರವನ್ನು ಕೈಗೊಂಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ IPS, ಡಿ.ಸಿ.ಪಿಯವರಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ ರವರ ತಂಡ ಈ ಕಾರ್ಯಾಚರಣೆಯನ್ನು ಮಾಡಿದ್ದರು.


