ಬೆಂಗಳೂರು; ಬೆಂಗಳೂರಿನಲ್ಲಿ ಉಪ್ಪಿನಂಗಡಿ ಮೂಲದ ಯುವಕನೋರ್ವ ದಿಡೀರ್ ಮೃತಪಟ್ಟ ಘಟನೆ ನಡೆದಿದೆ.
ಉಪ್ಪಿನಂಗಡಿ ಮಠ ನಿವಾಸಿ ಅಜ್ವದ್(18) ಮೃತ ಯುವಕ. ಅಜ್ವದ್ ಬೆಂಗಳೂರಿನಲ್ಲಿ ಸೂಪರ್ ಮಾರ್ಕೆಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ದಿಡೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ಸಾಗಿಸಿದ್ದ ಅಜ್ವದ್
ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ನಿಧನಕ್ಕೆ ನಿಖರ ಕಾರಣ ಸ್ಪಷ್ಟವಾಗಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಅಜ್ವದ್ ಎಸ್ ಎಸ್ಎಫ್ ಬೆಂಗಳೂರು ಕಾಡುಗೋಡಿ ಯುನಿಟ್ ಸಕ್ರಿಯ ಕಾರ್ಯಕರ್ತನಾಗಿದ್ದರು ಎನ್ನಲಾಗಿದೆ.