August 30, 2025
WhatsApp Image 2023-10-19 at 6.43.41 PM

ವಿಜಯಪುರ: ಗ್ರಾಮ ಪಂಚಾಯತ್ ಸದಸ್ಯನೊಬ್ಬ ಪಿಡಿಒಗೆ ಗನ್ ಪಾಯಿಂಟ್ ನಲ್ಲಿ ಧಮ್ಕಿ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ದೇವರನಿಂಬರಗಿಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯಿತಿ ಪಿಡಿಒ ವಿಶ್ವನಾಥ್ ರಾಠೋಡ್ ಗೆ ಗ್ರಾಮ ಪಂಚಾಯಿತಿ ಸದಸ್ಯ ಜಾಕಿರ್ ಮನಿಯಾರ್ ಗನ್ ತೋರಿ ಧಮ್ಕಿ ಹಾಕಿದ್ದಾರೆ.

ಸದಸ್ಯನನ್ನು ವಜಾಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ.

ಪ್ರಕರಣ ಸಂಬಂಧ ಸದಸ್ಯ ಜಾಕಿರ್ ಮನಿಯಾರ್ ವಿರುದ್ಧ ಪಿಡಿಒ ವಿಶ್ವನಾಥ್ ರಾಠೋಡ್ ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಣಕಾಸಿನ ವಿಚಾರವಾಗಿ ಗಲಾಟೆ ಆರಂಭಿಸಿದ್ದ ಜಾಕಿರ್ ಮನಿಯಾರ್ ಬಳಿಕ ಗನ್ ಸಮೇತವಾಗಿ ಗ್ರಾಮ ಪಂಚಾಯತ್ ಗೆ ಆಗಮಿಸಿ ಪಿಡಿಒ ಗೆ ಬೆದರಿಕೆ ಹಾಕಿದ್ದಾನಂತೆ. ಈ ಹಿನ್ನೆಲೆಯಲ್ಲಿ ಆತನ ಸದಸ್ಯತ್ವ ರದ್ದುಗೊಳಿಸುವಂತೆ ಪಿಡಿಒ ಗಳು ಆಗ್ರಹಿಸಿದ್ದಾರೆ.

About The Author

Leave a Reply