ಬೆಳ್ತಂಗಡಿ : ಪ್ಯಾಲೆಸ್ತೀನ್ ಭೂಮಿಗಾಗಿ ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಫೆಲೆಸ್ತೀನಿಗೆ ಭಾರತದ ಬೆಂಬಲ ಮುಂದುವರಿಸಬೇಕು ಮತ್ತು ಫೆಲಸ್ತೀನ್ ಹೋರಾಟಕ್ಕೆ ಭಾರತೀಯರಾದ ನಮ್ಮ ಬೆಂಬಲವಿದೆ ಎಂಬ ಐಕ್ಯ ಮತ ಪ್ರದರ್ಶನ, ಕ್ಷೇತ್ರಾದ್ಯಂತ ಪ್ರತೀ ಮಸೀದಿ ಮುಂಭಾಗದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು.
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ, ಲಾಯಿಲ, ಪೆರಲ್ದಾರಕಟ್ಟೆ, ಕನ್ನಡಿಕಟ್ಟೆ, ಲಾಯಿಲ, ಪುತ್ರಬೈಲು, ಕುಂಟಿನಿ, ಉಜಿರೆ, ಬಂಗೇರಕಟ್ಟೆಯಲ್ಲಿ ಎಸ್‌ಡಿಪಿಐ ವತಿಯಿಂದ ಭಿತ್ತಿ ಪತ್ರ ಪ್ರದರ್ಶಿಸಲಾಯಿತು.