November 8, 2025
WhatsApp Image 2023-10-22 at 9.31.18 AM

ಹಮದಾಬಾದ್: ಕಳೆದ 24 ಗಂಟೆಗಳಲ್ಲಿ ಗುಜರಾತ್‌ನಲ್ಲಿ ಗಾರ್ಬಾ ಡಾನ್ಸ್ ಮಾಡುವಾಗ ಹೃದಯಾಘಾತದಿಂದ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬಲಿಪಶುಗಳಲ್ಲಿ ಹದಿಹರೆಯದವರಿಂದ ಮಧ್ಯವಯಸ್ಕರು ಸೇರಿದ್ದಾರೆ. ಇವರಲ್ಲಿ, ಬರೋಡಾದ ದಾಭೋಯ್‌ನ 13 ವರ್ಷದ ಬಾಲಕ ಅತೀ ಚಿಕ್ಕ ವಯಸ್ಸಿನವನಾಗಿದ್ದಾನೆ.

 

ಶುಕ್ರವಾರ ಅಹಮದಾಬಾದ್‌ನ 24 ವರ್ಷದ ವ್ಯಕ್ತಿಯೊಬ್ಬರು ಗಾರ್ಬಾ ಸಮಯದಲ್ಲಿ ಹಠಾತ್ ಕುಸಿದು ಸಾವನ್ನಪ್ಪಿದರು, ಕಪದ್ವಾಂಜ್‌ನ 17 ವರ್ಷದ ಬಾಲಕ ಕೂಡ ಗಾರ್ಬಾ ಆಡುವಾಗ ಸಾವನ್ನಪ್ಪಿದ್ದಾನೆ. ರಾಜ್ಯದಲ್ಲಿ ಕಳೆದೊಂದು ದಿನದಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

ನವರಾತ್ರಿಯ ಮೊದಲ ಆರು ದಿನಗಳಲ್ಲಿ 108 ತುರ್ತು ಆಂಬ್ಯುಲೆನ್ಸ್ ಸೇವೆಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ 521 ಕರೆಗಳನ್ನು ಮತ್ತು ಉಸಿರಾಟದ ತೊಂದರೆಗಾಗಿ ಹೆಚ್ಚುವರಿ 609 ಕರೆಗಳನ್ನು ಸ್ವೀಕರಿಸಿದೆ.

About The Author

Leave a Reply