Visitors have accessed this post 744 times.
ಮಂಗಳೂರು: ನಿವೃತ್ತ ಅರಣ್ಯಾಧಿಕಾರಿಯೊಬ್ಬರಿಂದ ಬಿಲ್ ಪಾವತಿ ಗೆ ಬಿಲ್ ಮೊತ್ತದ 15 % ಕಮಿಷನ್ ಲಂಚ ಕೇಳಿದ ಮಹಿಳಾ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಂಗಳೂರು ವಿಭಾಗದ ಉಪ ಕೃಷಿ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ.2022-23ನೇ ಸಾಲಿನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ “ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ WDC 20” ಯೋಜನೆಯಡಿ ಬಂಟ್ವಾಳ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸರಕಾರದ ವತಿಯಿಂದ ಉಚಿತವಾಗಿ ವಿವಿಧ ಜಾತಿ ಅರಣ್ಯ ಮತ್ತು ತೋಟಗಾರಿಕಾ ಗಿಡಗಳನ್ನು ನೀಡಲಾಗಿತ್ತು. ಇದನ್ನು ಕೆಲವು ನರ್ಸರಿಗಳ ಮೂಲಕ ಪಡೆದುಕೊಳ್ಳಲಾಗಿತ್ತು, ಅಲ್ಲದೆ ಅರಣ್ಯ ಇಲಾಖೆ ಗುತ್ತಿಗೆದಾರರಿಂದ ಗಿಡಗಳನ್ನು ನಾಟಿ ಮಾಡಿಸಿತ್ತು. ಈ ಒಟ್ಟಾರೆ ಕಾಮಗಾರಿಗೆ 50 ಲಕ್ಷದಷ್ಟು ಹಣ ಸರಕಾರದಿಂದ ಬರಬೇಕಾಗಿತ್ತು. ಈ ಹಿನ್ನಲೆ ಕೃಷಿ ಇಲಾಖೆಯಲ್ಲಿ ಅಂದು ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾಗಿರುವ ಪರಮೇಶ್ ಎನ್.ಪಿ ಅವರು ಬಿಲ್ ಬಾಕಿ ಪಾವತಿಗೆ ಮಂಗಳೂರು ವಿಭಾಗದ ಉಪಕೃಷಿ ನಿರ್ದೇಶಕರಾದ ಶ್ರೀಮತಿ ಭಾರತಮ್ಮ ಅವರಲ್ಲಿ ಕೇಳಿಕೊಂಡಿದ್ದಾರೆ. ಈ ವೇಳೆ ಅಧಿಕಾರಿ ಭಾರತಮ್ಮ ಅವರು ಬಿಲ್ ಪಾವತಿಸಬೇಕಾದರೆ ಬಿಲ್ ಮೊತ್ತದ 15 % ಹಣವನ್ನು ಮುಂಗಡವಾಗಿ ನನಗೆ ಲಂಚದ ರೂಪದಲ್ಲಿ ನೀಡಬೇಕು ಇಲ್ಲವಾದರೇ ನಾನು ಬಿಲ್ ಪಾವತಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನಲೆ ಪರಮೇಶ್ ಅವರು ಅಕ್ಟೋಬರ್ 20 ರಂದು ಮತ್ತೆ ಅಧಿಕಾರಿ ಭಾರತಮ್ಮ ಅವರ ಹತ್ತಿರ ಮಾತನಾಡಿದಾಗ ಬಿಲ್ ಪಾವತಿಗೆ 1 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಮೇಶ್ ಅವರು ಲೋಕಾಯುಕ್ತ ದೂರು ನೀಡಿದ್ದರು. ಇಂದು ಮಂಗಳೂರು ಉಪ ಕೃಷಿ ನಿರ್ದೇಶಕಿಯಾದ ಶ್ರೀಮತಿ ಭಾರತಮ್ಮ ಅವರು ಪರಮೇಶ್ ಅವರಿಂದ 1 ಲಕ್ಷ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.Related Posts
ಉಳ್ಳಾಲ: ಆಟೋ ರಿಕ್ಷಾ ಚಾಲಕ ನಾಪತ್ತೆ..!
Visitors have accessed this post 525 times.
ಉಳ್ಳಾಲ: ಆಟೋ ರಿಕ್ಷಾ ಚಾಲಕರೋರ್ವರು ನಾಪತ್ತೆಯಾಗಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ . ಉಳ್ಳಾದ ಮಡ್ಯಾರ್ ನಿವಾಸಿ ಮೆಲ್ವಿನ್ ಮೋಂತೆರೋ (56) ನಾಪತ್ತೆಯಾದ ರಿಕ್ಷಾ ಚಾಲಕ. ಕೋಟೆಕಾರಿನ ಖಾಸಗಿ…
ಉಪ್ಪಿನಂಗಡಿ: ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ -ಪ್ರಕರಣ ದಾಖಲು
Visitors have accessed this post 130 times.
ಉಪ್ಪಿನಂಗಡಿ ಸಮೀಪ ಕರಾಯ ಗ್ರಾಮದ ಬದ್ಯಾರು ಎಂಬಲ್ಲಿ ಮಹಿಳೆಯೊಬ್ಬರೇ ಇದ್ದ ಮನೆಗೆ ನೀರು ಕೇಳಿಕೊಂಡು ಬಂದ ಅಪರಿಚಿತ ಗಂಡಸು ಮತ್ತು ಹೆಂಗಸು ಹಾಡುಹಗಲೇ ಮನೆಯೊಳಗೆ ಪ್ರವೇಶಿಸಿ ಮಗುವನ್ನು…
ಇಂದಿರಾ ಆಸ್ಪತ್ರೆಗೆ 25 ವರ್ಷಗಳ ಸಂಭ್ರಮ, ಆ.15ಕ್ಕೆ ರಕ್ತದಾನ, ವಾರ್ಷಿಕೋತ್ಸವ ಆಚರಣೆ
Visitors have accessed this post 292 times.
ಮಂಗಳೂರು: “ಆರೋಗ್ಯ ಕ್ಷೇತ್ರದಲ್ಲಿ ತನ್ನ ಉನ್ನತ ಛಾಪನ್ನು ಮೂಡಿಸಿದ ಇಂದಿರಾ ಆಸ್ಪತ್ರೆ ತನ್ನ 25ನೇ ವಾರ್ಷಿಕೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. 1999 ರಲ್ಲಿ ಸ್ಥಾಪನೆಯಾದಾಗಿನಿಂದ ಆಸ್ಪತ್ರೆ ಅತ್ಯುತ್ತಮ ವೈದ್ಯಕೀಯ…