ರಾಜ್ಯ ಸರಕಾರದ ಸ್ಟೆಮಿ ಯೋಜನೆ: ಪಾರ್ಶ್ವವಾಯು ಮತ್ತು ಹೃದಯಾಘಾತದ ದುಬಾರಿ ಚುಚ್ಚುಮದ್ದು ಇನ್ನು ಉಚಿತ

ಬೆಂಗಳೂರು: ಪಾರ್ಶ್ವವಾಯು ಮತ್ತು ಹೃದಯಾಘಾತ ನಿರ್ವಹಣೆಗೆ ದುಬಾರಿ ವೆಚ್ಚದ ಚುಚ್ಚುಮದ್ದುಗಳನ್ನು ಉಚಿತವಾಗಿ ನೀಡಲು ರಾಜ್ಯ ಸಿದ್ದರಾಮಯ್ಯ ಸರಕಾರ ನಿರ್ಧರಿಸಿದೆ.

ಪಾರ್ಶ್ವವಾಯು ರೋಗಕ್ಕೆ ರೂ. 60 ಸಾವಿರ ಮೌಲ್ಯದ ಆರ್‌ಟಿ ಪ್ಲಸ್ ಎಂಬ ಚುಚ್ಚುಮದ್ದನ್ನು ಹಾಗೂ ಪ್ರಸ್ತುತವಾಗಿ ಹೆಚ್ಚಾಗಿ ಕಂಡು ಬರುತ್ತಿರುವ ಹೃದಯಾಘಾತದ ರೂ. 40 ಸಾವಿರ ಮೌಲ್ಯದ ಟೆನೆಕ್ಟ್ ಪ್ಲಸ್ ಎಂಬ ಚುಚ್ಚುಮದ್ದನ್ನು ಉಚಿತವಾಗಿ ರೋಗಿ ಒದಗಿಸಲು ಸರಕಾರ ತೀರ್ಮಾನಿಸಿದ್ದು, ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಸ್ಟೆಮಿ ಯೋಜನೆಯಡಿ ಉಚಿತ
ಈ ಬಗ್ಗೆ ರಾಜ್ಯ ಆರೋಗ್ಯ ಸಚಿವರು ಮತ್ತು ದ..ಕ. ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಒಳಗಾದವರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಅಗತ್ಯವಿರುವ ದುಬಾರಿ ಬೆಲೆಯ ಈ ಚುಚ್ಚುಮದ್ದುಗಳನ್ನು ಸ್ಟೆಮಿ ಯೋಜನೆಯಡಿ ಉಚಿತವಾಗಿ ಒದಗಿಸಲು ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.

Leave a Reply