
ಉಡುಪಿ : ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್ ವಿಚಾರವಾಗಿ ಉಡುಪಿ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿರುವುದು ನಿಜ ಬಿಜೆಪಿ ಅವರು ಈ ಪ್ರಯತ್ನ ಸಫಲವಾಗುವುದಿಲ್ಲ ಒಮ್ಮೆ ಆಪರೇಷನ್ ಕಮಲ ಮಾಡಿ ಬಿಜೆಪಿ ಸಕ್ಸಸ್ ಆಗಿರಬಹುದು.



ಆದರೆ ಬಿಜೆಪಿ ಯಾವುದೇ ಪ್ರಯತ್ನ ಸಫಲ ಆಗುವುದಿಲ್ಲ 50 ಕೋಟಿ ಆಫರ್ ಬಗ್ಗೆ ರವಿ ಗಣಿಗ ಬಳಿಯೇ ಕೇಳಿ ಒಮ್ಮೆ ಆಪರೇಷನ್ ಕಮಲ ಮಾಡಿ ಸಕ್ಸಸ್ ಆಗಿರಬಹುದು ಯಾವಾಗಲೂ ಹಾಗೆ ಆಗುವುದಿಲ್ಲ. ಬಿಜೆಪಿಗೆ ಅಧಿಕಾರದ ದಾಹವಿದೆ ಎಂದು ಉಡುಪಿಯಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪಿಸಿದರು.
ಇನ್ನೂ ಬಂಟರ ಸಮುದಾಯ ಕುರಿತು ಮಾತನಾಡಿದ ಅವರು, ಬಂಟರ ಅಭಿವೃದ್ಧಿ ನಿಗಮದ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದೆವು. ವಿಶ್ವ ಬಂಟರ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಉಡುಪಿಯ ಅಜ್ರಕಾಡು, ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶಿಷ್ಟ ಸಂಸ್ಕೃತಿ ಪರಂಪರೆ ಇರುವ ಸಮುದಾಯ ಬಂಟರದ್ದು ರಾಜಕೀಯ ಕ್ರೀಡೆ ಸಿನಿಮಾ ಕ್ಷೇತ್ರದಲ್ಲಿ ಬಂಟರ ಛಾಪು ಇದೆ ಎಂದರು.
ಮನುಷ್ಯತ್ವ ಮೊದಲು ಬದುಕು ಆಮೇಲೆ. ಮನುಷ್ಯ ಮನುಷ್ಯರನ್ನು ದ್ವೇಷ ಮಾಡುವ ಪ್ರವೃತ್ತಿಯನ್ನು ಬಿಡಬೇಕು ಮುಂದಿನ ವರ್ಷ ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಿಸುತ್ತೇನೆ ಎಂದು ಸಮಾವೇಶದಲ್ಲಿ ಬಂಟರ ಅಭಿವೃದ್ಧಿ ಸಂಘಟನೆ ಬಗ್ಗೆ ಚರ್ಚಿಸಿ ವಿಶ್ವ ಬಂಟರ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.