Visitors have accessed this post 385 times.
ಮೂಡಬಿದಿರೆ: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರ ತಂದೆ ಶತಾಯುಷಿ 106 ವರ್ಷದ ಮಿಜಾರು ಗುತ್ತು ಆನಂದ ಆಳ್ವ ಇಂದು ವಿಧಿವಶರಾಗಿದ್ದಾರೆ. ಇಳಿ ಮಯಸ್ಸು ಮೀರಿದ್ದರೂ ಮೀಜಾರಿನ ತಮ್ಮ ಮನೆಯಲ್ಲಿ ಆರೋಗ್ಯದಲ್ಲೇ ಇದ್ದ ಆನಂದ ಆಳ್ವ ಅವರು ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.
1918ರಲ್ಲಿ ಜನಿಸಿದ್ದ ಆನಂದ ಆಳ್ವ ಅವರು ಕಂಬಳ, ದೈವಾರಾಧನೆ, ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಪ್ರಗತಿಪರ ರೈತರೂ ಆಗಿದ್ದ ಅವರು, ಡಾ. ಮೋಹನ್ ಆಳ್ವ ಸಹಿತ ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.