Visitors have accessed this post 1298 times.
ಉಪ್ಪಿನಂಗಡಿ: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ನಾಯಿ ರಕ್ಷಿಸಿದ ಘಟನೆ ಉಪ್ಪಿನಂಗಡಿ ಬಳಿ ನಡೆದಿದೆ. ಪತಿಯೊಂದಿಗೆ ಜಗಳವಾಡಿದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ಕು ಕಿ.ಮೀ. ದೂರದ ಉಪ್ಪಿನಂಗಡಿಗೆ ರಾತ್ರಿ ವೇಳೆ ನಡೆದುಕೊಂಡು ಬಂದಿದ್ದಾರೆ. ಅವರನ್ನು ಸಾಕು ನಾಯಿ ಹಿಂಬಾಲಿಸಿಕೊಂಡು ಬಂದಿದ್ದು, ನದಿಗೆ ಹಾರಲು ಸೇತುವೆ ಬಳಿ ಹೋಗುವಾಗ ಚೂಡಿದಾರ ಹಿಡಿದಿಳೆದು ನಿರಂತರವಾಗಿ ಬೊಗಳಿದೆ. ನಾಯಿ ನಿರಂತರವಾಗಿ ಬೊಗಳುಗುವುದನ್ನು ಗಮನಿಸಿದ ಬೈಕ್ ಸವಾರ ಹಾಗೂ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ. 16 ವರ್ಷದ ಹಿಂದೆ ದಂಪತಿ ಪ್ರೀತಿಸಿ ಮದುವೆಯಾಗಿದ್ದು, ಕೆಲವು ವರ್ಷಗಳಿಂದ ವಿರಸವಾಗಿತ್ತು. ಗುರುವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿದ್ದು, ಬೇಸರಗೊಂಡ ಪತ್ನಿ ನೇತ್ರಾವತಿ ನದಿ ಸೇತುವೆಯಿಂದ ನದಿಗೆ ಹಾರಲು ಬಂದಿದ್ದಾರೆ. ಆಕೆಯನ್ನು ಹಿಂಬಾಲಿಸಿ ಬಂದ ನಾಯಿ ಚೂಡಿದಾರ ಹಿಡಿದೆಳೆದು ನಿರಂತರವಾಗಿ ಬೊಗಳಿದೆ. ಇದನ್ನು ಗಮನಿಸಿದ ಬೈಕ್ ಸವಾರರೊಬ್ಬರು ಸ್ಥಳೀಯರಾದ ಯು.ಟಿ. ಫಯಾಜ್ ಅವರಿಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಅವರು ಮಹಿಳೆಯನ್ನು ರಕ್ಷಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.Related Posts
ಪರಪ್ಪನ ಅಗ್ರಹಾರ ಜೈಲಿನಿಂದ ಹೆಚ್.ಡಿ ರೇವಣ್ಣ ಬಿಡುಗಡೆ
Visitors have accessed this post 204 times.
ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಿಂದ ಜೆಡಿಎಸ್ ಶಾಸಕ ಹೆಚ್ಡಿ ರೆವಣ್ಣ ಬಿಡುಗಡೆಯಾಗಿದ್ದಾರೆ. ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ರೇವಣ್ಣನಿಗೆ ಸೋಮವಾರ…
ನೈರುತ್ಯ ಪದವೀಧರ ಕ್ಷೇತ್ರ ಅಭ್ಯರ್ಥಿ ಡಾ. ಶೇಕ್ ಬಾವ ತುಳುನಾಡು ರಕ್ಷಣಾ ವೇದಿಕೆ ಕಚೇರಿಗೆ ಭೇಟಿ
Visitors have accessed this post 369 times.
ಕರ್ನಾಟಕ ರಾಜ್ಯ ವಿಧಾನಪರಿಷತ್ ಚುನಾವಣೆ ಜೂನ್ 3 ರಂದು ನಡೆಯುತ್ತಿದ್ದು ನೈರುತ್ಯ ಪದವೀಧರ ಕ್ಷೇತ್ರ ದಿಂದ ಡಾ. ಶೇಕ್ ಬಾವ ರವರು ಸ್ಪರ್ಧಿಸುತ್ತಿದ್ದು ಬಾವ ರವರು ಮ್ಯಾನೇಜ್ಮೆಂಟ್…
ಮಂಗಳೂರು: ವಿಮಾನ ನಿಲ್ದಾಣ, ಇ-ಸಿಗರೇಟ್ ಬಿಡಿ ಭಾಗ ಸಾಗಾಟ ಯತ್ನ- ವ್ಯಕ್ತಿಯ ಸೆರೆ
Visitors have accessed this post 431 times.
ಮಂಗಳೂರು: ವಿಮಾನ ನಿಲ್ದಾಣಕ್ಕೆ ದುಬ್ಬಾಯಿಂದ ಆಗಮಿಸಿದ ಪ್ರಯಾಣಿಕ ನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಈ ಒಳಪಡಿಸಿದಾಗ 9,92,940 ಮೌಲ್ಯದ ಇ ಸಿಗ ರೇಟ್ಗೆ ಸಂಬಂಧಿಸಿದ ವಿವಿಧ ವಸ್ತುಗಳು…