August 30, 2025
WhatsApp Image 2023-11-01 at 10.21.22 PM

ಪುತ್ತೂರು: ಸಂಪ್ಯ ಪೋಲಿಸ್ ಠಾಣಾ ವ್ಯಾಪ್ತಿಯ ಬಡಗಣ್ಣೂರು ಕೊಯಿಲಾ ಎಂಬಲ್ಲಿ ನವೀನ್ ಕುಮಾರ್ ರೈಯವರ ಹಳೆ ಮನೆಯಿಂದ ಅಡಿಕೆ ಕಳ್ಳತನ ನಡೆಸಿದ ಕಳ್ಳರನ್ನು ಸೆರೆಹಿಡಿದಾಗ ಭಜರಂಗದಳದ ಕಾರ್ಯಕರ್ತರ ಭಯಾನಕ ದುಷೃತ್ಯ ಬಯಲಾಗಿದ್ದು.ಪ್ರಕರಣ ನಡೆದು ಒಂದು ವಾರದೊಳಗೆ ಭಜರಂಗದಳದ ಕಳ್ಳರ ಹೆಡೆಮುರಿ ಕಟ್ಟಿದ ಸಂಪ್ಯ ಪೋಲೀಸರ ಕಾರ್ಯವೈಖರಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಸಮಿತಿಯು ಶ್ಲಾಘಿಸುತ್ತದೆ ಎಂದು ಪಕ್ಷದ ಪುತ್ತೂರು ವಿಧಾನಸಭಾ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಆರೋಪಿಗಳಾಗಿರುವ ಪುನಿತ್,ಅಶೋಕ,ಜಯಚಂದ್ರ ಹಾಗೂ ಶ್ರವಣ್ ಭಜರಂಗದಳದ ಸಕ್ರಿಯ ಕಾರ್ಯಕರ್ತರು ರಾತ್ರಿ ವೇಳೆಯಲ್ಲಿ ನಿರ್ದಿಷ್ಟ ವ್ಯಾಪ್ತಿಯ ಹೆಸರೇಳಿ ಅಕ್ರಮ ದನ ಸಾಗಾಟವಾಗುತ್ತಿದೆ ಎಂದು ತಪ್ಪು ಮಾಹಿತಿ ನೀಡಿ ಪೋಲೀಸರ ದಾರಿ ತಪ್ಪಿಸಿ ಈ ಭಜರಂಗದಳದ ಕಾರ್ಯಕರ್ತರು ಇನ್ನೊಂದು ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ನಡೆಸುತ್ತಿದ್ದು.ಸಂಪ್ಯ ಪೋಲೀಸರ ನಿಷ್ಪಕ್ಷಪಾತ ತನಿಖೆ ಯಿಂದ ಆರೋಪಿಗಳ ದುಷೃತ್ಯ ಬೆಳಕಿಗೆ ಬಂದು ಸಂಘಪರಿವಾರವು ದೇಶಭಕ್ತಿ ಮತ್ತು ದನದ ಹೆಸರೇಳಿಕೊಂಡು ಎಂತೆಂತಹ ಭಯಾನಕ ಕೃತ್ಯ ನಡೆಸುತ್ತಿದೆ ಎಂದು ಬೆಳಕಿಗೆ ಬಂದಂತಾಗಿದೆ.
ಆದರೆ ಇದರ ಬಗ್ಗೆ ಬಿಜೆಪಿ ಮತ್ತು ಸಂಘಪರಿವಾರ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡದೆ ಅಥವಾ ಘಟನೆಯನ್ನು ಖಂಡಿಸದೆ ಇರುವುದರಿಂದ ಈ ಕಳ್ಳತನದಿಂದ ಮುಖಂಡರಿಗೂ ಪಾಲು ಇದೆಯೇ ಎಂದು ಸಂಶಯ ಪಡುವಂತಾಗಿದೆ.
ನೈಜ ಹಿಂದುಗಳು ಇನ್ನಾದರು ಸಂಘಪರಿವಾರದ ನಕಲಿ ದೇಶಪ್ರೇಮ ಮತ್ತು ನಕಲಿ ಗೋಮಾತೆಯ ಪ್ರೇಮವನ್ನು ಅರಿತುಕೊಂಡು ಅವರನ್ನು ತಿರಸ್ಕರಿಸಿ ಅವರ ಸುಳ್ಳು ಅಪವಾದಗಳಿಗೆ ಮಣಿಯಬಾರದುದೆಂದು ಆಗ್ರಹಿಸಿದ್ದಾರೆ.

ಬಡಗಣ್ಣೂರು,ವಿಟ್ಲ,ಪೆರುವಾಯಿ ಹಾಗೂ ಕೇರಳದ ಗಡಿಭಾಗದ ಆಸುಪಾಸಿನಲ್ಲಿ ಈ ಹಿಂದಿನಿಂದಲೂ ಸಂಘಪರಿವಾರ ಕಾರ್ಯಕರ್ತರು ರಾತ್ರಿ ವೇಳೆಯಲ್ಲಿ ದನ ಸಾಗಾಟ ತಡೆಯುವ ನೆಪದಲ್ಲಿ ಮಾರಕಾಯುಧಗಳನ್ನು ಹಿಡಿದು ಗಸ್ತು ತಿರುಗಿಕೊಂಡು ದಾರಿ ಹೋಕರಿಗೆ,ಪ್ರಯಾಣಿಕರಿಗೆ ಕಿರುಕುಳ ನೀಡುವ ಪ್ರಕರಣ ಈ ಹಿಂದೆಯೂ ಕೂಡ ವರದಿಯಾಗಿ ಕೆಲವೊಂದು ಪ್ರಕರಣ ಕೂಡ ದಾಖಲಾದ ಇತಿಹಾಸ ಇದೆ.ಆದರೆ ಅವರ ನೈಜ ಉದ್ದೇಶ ಪೋಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ಪೋಲಿಸರು ಈ ಬಗ್ಗೆ ಇನ್ನಷ್ಟು ಕೂಲಂಕಷ ತನಿಖೆ ನಡೆಸಿ ಇಂತಹ ಕೃತ್ಯದಲ್ಲಿ ಬೇರೆ ಯಾರೆಲ್ಲಾ ಇದ್ದಾರೆ ಎಂದು ಅರಿತುಕೊಂಡು ಈ ದುಷ್ಕರ್ಮಿಗಳ ಬಣ್ಣ ಬಯಲು ಮಾಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ

About The Author

Leave a Reply