ವಿಳಾಸ ಕೇಳುವ ನೆಪದಲ್ಲಿ ವಿದ್ಯಾರ್ಥಿಯ ಕಿಡ್ನ್ಯಾಪ್…!

ಬೆಂಗಳೂರಿನಲ್ಲಿ ವಿದ್ಯಾರ್ಥಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿದ್ದ ದುಷ್ಕರ್ಮಿಗಳು ಹಾಸನದಲ್ಲಿ ಬಿಟ್ಟು ಹೋಗಿರುವ ಘಟನೆ ನಡೆದಿದೆ.

ನಾಗಾರ್ಜುನ (17) ಪಿಯು ಕಾಲೇಜು ವಿದ್ಯಾರ್ಥಿ ಕಿಡ್ನ್ಯಾಪ್ ಆದವನು. ಬೆಂಗಳೂರಿನ ಅನಂತಪುರದ ಕೃಷ್ಣೇಗೌಡ ಎಂಬುವವರ ಮಗ.

ಯುವಕ ಕಾಲೇಜಿಗೆ ತೆರಳುತ್ತಿದ್ದ ವೇಳೆ ನಿನ್ನೆ ಬೆಳಿಗ್ಗೆ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಆತನನ್ನು ಅಪಹರಿಸಿದ್ದರು.

ಪ್ರಜ್ಞೆ ತಪ್ಪಿದ್ದ ವಿದ್ಯಾರ್ಥಿ ಎಚ್ಚರವಾದಾಗ ಹಾಸನ ಜಿಲ್ಲೆಯ ಅರಕಲಗೂಡು ಸಮೀಪವಿದ್ದ. ಅಲ್ಲಿಯೇ ಇದ್ದ ಮನೆಗೆ ತೆರಳಿ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಹಾಸನಕ್ಕೆ ಬಂದು ಮಗನನ್ನು ಕರೆದೊಯ್ದ ಪೋಷಕರು ಹಾಸನದ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಬೆಂಗಳೂರಿನ ಯಲಹಂಕ ಠಾಣೆಯಲ್ಲಿ ವಿದ್ಯಾರ್ಥಿ ಕಿಡ್ನ್ಯಾಪ್ ಆದ ಬಗ್ಗೆ ದೂರು ನೀಡಲಾಗಿದೆ. ತನಿಖೆ ಬಳಿಕ ವಿದ್ಯಾರ್ಥಿ ಅಪಹರಣಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.

Leave a Reply