‘ಯಜಮಾನಿ ಮಹಿಳೆ’ಯರ ಗಮನಕ್ಕೆ: ಜಸ್ಟ್ ಈ ಕೆಲಸ ಮಾಡಿ, ಒಟ್ಟಿಗೆ ‘ಗೃಹಲಕ್ಷ್ಮಿ’ಯ 6,000 ಹಣ ಬರುತ್ತೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಪ್ರೋತ್ಸಾಹ ಧನ ನೀಡುವಂತ ಗೃಹ ಲಕ್ಷ್ಮಿ ಯೋಜನೆ(Gruha Lakshmi Scheme) ಜಾರಿಗೊಳಿಸಿದೆ. ಆಗಸ್ಟ್ ನಿಂದ ಆರಂಭಗೊಂಡ ಈ ಯೋಜನೆಯ ಅಡಿಯಲ್ಲಿ ಮೂರು ತಿಂಗಳಿಂದ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ.

ಒಂದು ವೇಳೆ ಯಜಮಾನಿ ಮಹಿಳೆಯರಿಗೆ ಈ ಹಣ ಬಂದಿಲ್ಲ ಅಂದ್ರೇ, ಜಸ್ಟ್ ಈ ಕೆಲಸ ಮಾಡಿ, 6,000 ಒಟ್ಟಿಗೆ ಬರಲಿದೆ.

ಆಗಸ್ಟ್ ನಿಂದ ಆರಂಭಗೊಂಡಂತ ಯಜಮಾನಿ ಮಹಿಳೆಯರ ಗೃಹಲಕ್ಷ್ಮಿ ಯೋಜನೆಯ ಹಣ, ಅನೇಕ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಅಕ್ಟೋಬರ್ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದಂತ ಎಲ್ಲಾ ಮಹಿಳೆಯರಿಗೆ 100% ಹಣವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುತ್ತದೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಜೊತೆಗೆ ಆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಈ ಕೆಲಸ ಮಾಡಿದ್ರೇ ಮೂರು ತಿಂಗಳ 6000 ಹಣ ಒಟ್ಟಿಗೆ ಬರುತ್ತೆ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಅರ್ಜಿ ಸಲ್ಲಿಸಿ ಹಣ ಬಂದಿಲ್ಲ ಅಂತ ಚಿಂತೆ ಮಾಡೋದು ಬಿಟ್ಟು, ನೀವು ಅರ್ಜಿ ಸಲ್ಲಿಸಿದಾಗ ನೀಡಿರೋ ದಾಖಲೆಗಳನ್ನು ಒಮ್ಮೆ ಚೆಕ್ ಮಾಡಬೇಕಿದೆ.

ನೀವು ಕೊಟ್ಟಿರೋ ದಾಖಲೆಗಳಲ್ಲಿ ಯಾವುದೇ ರೀತಿಯಲ್ಲಿ ನಿಮ್ಮ ಹೆಸರು ಒಂದೊಂದರಲ್ಲಿ ಒಂದೊಂದು ರೀತಿ ಇರುವಂತಿಲ್ಲ. ಎಲ್ಲಾ ದಾಖಲೆಗಳಲ್ಲಿಯೂ ಒಂದೇ ರೀತಿಯ ಹೆಸರು ಇರಬೇಕಿದೆ. ಒಂದು ವೇಳೆ ಇಲ್ಲ ಅಂದ್ರೇ ಸರಿ ಮಾಡಿ, ನೀಡಿದ್ರೇ ಹಣ 100% ನಿಮ್ಮ ಖಾತೆಗೆ ಜಮಾ ಆಗಲಿದೆ.

ಇನ್ನೂ ಇ-ಕೆವೈಸಿ ನಿಮ್ಮ ಬ್ಯಾಂಕ್ ಖಾತೆಗೆ ಮಾಡಿಸಿರಬೇಕು. ನಿಮ್ಮ ಆಧಾರ್ ಕಾರ್ಡ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು. ಒಂದು ವೇಳೆ ಮಾಡಿಲ್ಲ ಅಂದ್ರೇ ಕೂಡಲೇ ಮಾಡಿಸಿ, ಆಗ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮೂರು ತಿಂಗಳ 6000 ಗೃಹಲಕ್ಷ್ಮಿ ಯೋಜನೆಯ ಒಟ್ಟಾರೆ ಹಣ ಒಮ್ಮೆಗೆ ಡಿಬಿಟಿ ಮೂಲಕ ಜಮಾ ಆಗಲಿದೆ.

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ ಅಂದ್ರೇ ಪೋಸ್ಟ್ ಆಫೀಸಿನಲ್ಲಿ ಖಾತೆ ತೆರೆಯಿರಿ. ಆಗ ಆ ಪೋಸ್ಟ್ ಆಫೀಸ್ ಖಾತೆಗೆ ಹಣ ಜಮಾ ಆಗಲಿದೆ.

Leave a Reply