ಸುಳ್ಯ: ಪಾಂಡಿಚೇರಿಯಲ್ಲಿ ಪಂಜದ ಯುವಕನೊಬ್ಬ ಸಮುದ್ರ ಪಾಲಾದ ಘಟನೆ ನಡೆದಿದೆ.
ಮೃತರನ್ನು ಪಂಜ ಸಮೀಪದ ಕೂತ್ಕುಂಜ ಬಿಪಿನ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು ಗೆಳೆಯರೊಂದಿಗೆ ಶನಿವಾರ ಪಾಂಡಿಚೇರಿಗೆ ಹೋಗಿದ್ದ. ರವಿವಾರ ಬೀಚ್‌ಗೆ ಹೋಗಿದ್ದ ವೇಳೆ ಸಮುದ್ರ ಪಾಲಾಗಿದ್ದಾನೆ. ಮೃತದೇಹ ಪತ್ತೆಯಾಗಿದ್ದು, ಊರಿಗೆ ತರುವ ಪ್ರಕ್ರಿಯೆ ನಡೆಯುತ್ತಿದೆ.