ಬಿ.ಸಿ.ರೋಡ್ ನಲ್ಲಿ ಶುದ್ಧ ಶಾಖಾಹಾರಿ ಹೋಟೆಲ್ ಆಲಿಯಾ ಸಾಗರ್ ಶುಭಾರಂಭ

ಬಂಟ್ವಾಳ : ದರ್ಬಾರ್ ಗ್ರೂಫ್ ಆಪ್ ಹೊಟೇಲ್ಸ್ ಇದರ ನೂತನ ಆಲಿಯಾ ಸಾಗರ್ ಮಲ್ಟಿ ಕುಶನ್ ವೆಜ್ ರೆಸ್ಟೊರೆಂಟ್ ಬಿ.ಸಿ.ರೋಡಿನ ಸ್ಮಾರ್ಟ್ ಸಿಟಿ ಕಟ್ಟಡದ ಕೆಳ ಅಂತಸ್ತಿನಲ್ಲಿ ಶುಭಾರಂಭಗೊಂಡಿತು. ಧರ್ಮಗುರುಗಳಾದ ಬಂಬ್ರಾಣ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಉಸ್ತಾದ್ ದುವಾಶಿರ್ವಾಚನಗೈದರು. ಇರ್ಷಾದ್ ದಾರಿಮಿ ಮಿತ್ತಬೈಲ್, ಎಂ.ವೈ. ಅಶ್ರಫ್ ಫೈಝಿ ಮಿತ್ತಬೈಲ್, ಎಂ.ಕೆ. ಅಝೀಝ್ ಅಮ್ಝದಿ ಮಾವಿನಕಟ್ಟೆ ಇವರ ಉಪಸ್ಥಿತಿಯಲ್ಲಿ ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ, ಎಂ. ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ ಉದ್ಘಾಟಿಸಿದರು.

ಈ ಸಂದರ್ಭ ಮಾಜಿ ಸಚಿವ ಬಿ. ರಮಾನಾಥ ರೈ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಬಂಟ್ವಾಳ ತಾಲೂಕು ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಜಿ.ಪಂ. ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ, ಪತ್ರಕರ್ತ ಲತೀಫ್ ನೇರಳಕಟ್ಟೆ, ಬಂಟ್ವಾಳ ಸಂಚಾರಿ ಠಾಣಾಧಿಕಾರಿ ಸುತೇಶ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಸುರೇಶ್ ಸಾಲ್ಯಾನ್, ಮಹಮ್ಮದ್ ಕಳವಾರು, ಡಾ. ಮುಸ್ತಾಫ ಬಸ್ತಿಕೋಡಿ, ಕಲಾಬಾಗಿಲು ಬುರೂಜ್ ಶಾಲಾ ಸಂಚಾಲಕ ಶೇಖ್ ರಹ್ಮತುಲ್ಲಾ ಮೊದಲಾದವರು ಭೇಟಿ ನೀಡಿ ಶುಭ ಹಾರೈಸಿದರು.

ಬಿ.ಸಿ.ರೋಡಿನ ಹೃದಯಭಾಗದಲ್ಲಿ ಕಾರ್ಯ ನಿರ್ವಹಸುತ್ತಿರುವ ಆನಿಯಾ ದರ್ಬಾರ್ ರೆಸ್ಟೋರೆಂಟ್ ಹಾಗೂ ಆನಿಯಾ ದರ್ಬಾರ ಡಿಲೆಕ್ಸ್ ಮಲ್ಟಿ ಕುಶನ್ ಎ.ಸಿ. ನಾನ್ ವೆಜ್ ಹೊಟೇಲ್ ಗ್ರಾಹಕರಿಗೆ ಅತ್ಯುತ್ತಮ ವಾದ ಸೇವೆಯನ್ನು ನೀಡುತ್ತಿದೆ. ಗ್ರಾಹಕರ ಬೇಡಿಕೆಗೆ ಮಣಿದು ಇದರ ಪಕ್ಕದಲ್ಲೇ ಮೂರನೇ ಹೊಟೇಲ್ ಆಗಿ ಆಲಿಯಾ ಸಾಗರ್ ಮಲ್ಟಿ ಕುಶನ್ ವೆಜ್ ರೆಸ್ಟೋರೆಂಟ್ ಆರಂಭಿಸಲಾಗಿದೆ. ಶುಚಿ ರುಚಿಯಾದ ಊಟ ಉಪಹಾರದ ಜೊತೆಗೆ ಹಣ್ಣಿನ ಜ್ಯೂಸ್ ಗಳು, ಐಸ್ ಕ್ರೀಂ, ಎಲ್ಲಾ ತರಹದ ಚಾಟ್ ಐಟಂಗಳು, ಸೌತ್ ಇಂಡಿಯನ್ ಹಾಗೂ ನಾರ್ತ್ ಇಂಡಿಯನ್ ಪುಡ್ ಗಳು ಇಲ್ಲಿ ಲಭ್ಯವಿದೆ. ಈಗಾಗಲೇ ಎರಡು ನಾನ್ ವೆಜ್ ಹೊಟೇಲ್ ನ ಯಶಸ್ಸಿಗೆ ಸಹಕಾರ ನೀಡಿರುವ ಗ್ರಾಹಕರು ಆಲಿಯಾ ಸಾಗರ್ ಗೂ ಭೇಟಿ ನೀಡುವಂತೆ ಆನಿಯಾ ದರ್ಬಾರ್ ಗ್ರೂಪ್ಆಪ್ ಹೊಟೇಲ್ಸ್ ನ ಮಾಲಕ ಹಂಝ ಬಸ್ತಿಕೋಡಿ ತಿಳಿಸಿದ್ದಾರೆ.

Leave a Reply