Visitors have accessed this post 279 times.
ಮಂಗಳೂರು: ತುಳು ಚಲನಚಿತ್ರ ನಿರ್ಮಾಪಕರ ಸಂಘವು ಹಲವು ಬೇಡಿಕೆಗಳನ್ನು ಹೊಂದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.24ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಭೇಟಿಯಾಗಿ ಮನವಿ ಮಾಡುವುದಾಗಿ ಸಂಘದ ಅಧ್ಯಕ್ಷ ಡಾ.ಆರ್. ಧನರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಪ್ರಾದೇಶಿಕ 20 ಚಲನಚಿತ್ರಕ್ಕೆ ಸಬ್ಸಿಡಿಯನ್ನು ಸರಕಾರದಿಂದ ನೀಡಬೇಕು, ಮಲ್ಟಿಪ್ಲೆಕ್ಸ್‌ಗಳಲ್ಲಿ ನೀಡುವ ಶೇಕಡಾವಾರು ಹಣವನ್ನು ಕನ್ನಡ, ಹಿಂದಿ ಸಿನಿಮಾಗಳಂತೆ ತುಳು ಸಿನಿಮಾಗಳಿಗೆ ನೀಡಬೇಕು, ತುಳು ನಿರ್ಮಾಪಕ ಸಂಘಕ್ಕೆ ಸರಕಾರದಿಂದ ಕಟ್ಟಡ ಕಟ್ಟಲು ಜಾಗವನ್ನು ನೀಡಲು ಜಿಲ್ಲಾಧಿಕಾರಿಯವರಿಗೆ ಆದೇಶ ನೀಡಬೇಕು. ಅದೇ ರೀತಿ ಪ್ರಾದೇಶಿಕ ಚಲನಚಿತ್ರಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಆಯ್ಕೆ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆ ರಾಜ್ಯ ಪ್ರಶಸ್ತಿಗೆ ತುಳು ಸಿನಿಮಾರಂಗಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಜಿಲ್ಲಾಡಳಿತಕ್ಕೆ ಆದೇಶ ನೀಡಬೇಕು ಹಾಗೂ ಸಬ್ಸಿಡಿ ಕಮಿಟಿಯಲ್ಲಿ ತುಳು ಭಾಷೆ ಬಲ್ಲ ನಿರ್ಮಾಪಕ, ನಿರ್ದೇಶಕರನ್ನು ಆಯ್ಕೆ ಮಾಡಬೇಕು” ಎಂದು ಈ ಸಂದರ್ಭದಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಕಿಶೋರ್ ಡಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಸಚಿನ್ ಎ.ಎಸ್., ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೊಂಚಾಡಿ ಮತ್ತಿತರರು ಉಪಸ್ಥಿತರಿದ್ದರು.