ಬೆಳ್ತಂಗಡಿ : ಕಡಿರುದ್ಯಾವರದಲ್ಲಿ ಮರಳು ಗಣಿಗಾರಿಕೆಯ ಬಗ್ಗೆ ದೂರು ನೀಡಿದ್ದಾರೆ ಎಂದು ಹೇಳಿ ತಂಡವೊಂದು ಮನೆಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಡಿರುದ್ಯಾವರ ಗ್ರಾಮದ ನಿವಾಸಿ ನಳಿನಿ ಎಂಬವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಆರೋಪಿಗಳಾದ ರಾಧಾಕೃಷ್ಣ ರಂಜಿತ್, ಆನಂದ ಗೌಡ, ಸುದರ್ಶನ, ಸುಧಾಕರ ಹಾಗೂ ಇತರರು ಮನೆಗೆ ಆಗಮಿಸಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.