ಮಂಗಳೂರು: ಮನೆಮಂದಿಯನ್ನು ಕಟ್ಟಿ ಹಾಕಿ ದರೋಡೆ..!

ಮಂಗಳೂರು: ನಗರ ಹೊರವಲಯದ ಉಳಾಯಿಬೆಟ್ಟು ಎಂಬಲ್ಲಿನ‌ ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್‌ಗೆ ನುಗ್ಗಿದ ಸುಮಾರು 9 ಮಂದಿಯ ತಂಡವೊಂದು ದರೋಡೆಗೈದ ಘಟನೆ ರಾತ್ರಿ 7:45 ರಿಂದ 8:10ರ ಮಧ್ಯೆ ಸಂಭವಿಸಿದೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪದ್ಮನಾಭ ಕೋಟ್ಯಾನ್ ತನ್ನ ಫಾರ್ಮ್ ಹೌಸ್‌ನಲ್ಲಿದ್ದಾಗ ಮುಸುಕು ಹಾಕಿಕೊಂಡು ಒಳನುಗ್ಗಿದ ದರೋಡೆಕೋರರು ಚೂರಿ ತೋರಿಸಿಕೊಂಡು ಹಣಕ್ಕಾಗಿ ಬೇಡಿಕೆ ‌ಇರಿಸಿದ್ದಾರೆ ಎನ್ನಲಾಗಿದೆ. ‌

ಅಲ್ಲದೆ ಪದ್ಮನಾಭ ಕೋಟ್ಯಾನ್ ಮತ್ತವರ ಕುಟುಂಬದ ಸದಸ್ಯರನ್ನು ಬೆಡ್‌ಶೀಟ್‌ನಿಂದ ಕಟ್ಟಿ ಹಾಕಿದ್ದರು. ಈ ಸಂದರ್ಭ ಪದ್ಮನಾಭ ಕೋಟ್ಯಾನ್‌ ಅವರ ಕೈಗೆ ಗಾಯವಾಗಿದೆ. ದರೋಡೆಕೋರರು ಮನೆಯನ್ನು ಜಾಲಾಡಿ ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ.‌ ಮನೆಯ ಅಂಗಳದಲ್ಲಿದ್ದ ವಾಹನವನ್ನು ಸ್ವಲ್ಪ ದೂರ ಕೊಂಡೊಯ್ದು ಬಳಿಕ ಅಲ್ಲೇ ಅದನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ದರೋಡೆಕೋರ ಮಾಹಿತಿ ಕಲೆ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಅಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

Leave a Reply