
ಉಡುಪಿ : ಮುಸ್ಲಿಮರಿಗೆ ಕಾಂಗ್ರೆಸ್ ಪ್ರಾಧಾನ್ಯತೆ ಕುರಿತ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಉಡುಪಿಯಲ್ಲಿ ಸಿ.ಟಿ ರವಿ ತಿರುಗೇಟು ನೀಡಿದ್ದು, ಸ್ಪೀಕರ್ ಸ್ಥಾನ ಸಾಂವಿಧಾನಿಕ ಹುದ್ದೆ, ಸ್ಪೀಕರ್ ಸ್ಥಾನ ಮಸೀದಿಯ ಮೌಲ್ವಿ ಹುದ್ದೆಯಲ್ಲ ಎಂದು ಟಾಂಗ್ ನೀಡಿದರು.



ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಮೌಲ್ವಿಗೆ ಜೀ ಹುಜೂರ್ ಅನ್ನುತ್ತಿಲ್ಲ, ಆ ಹುದ್ದೆಗೆ ಸಿಗುವ ಗೌರವ ಜಾಮಿಯಾ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ. ಆ ಹುದ್ದೆಯ ಗೌರವ ಕೆಳಗೆ ಇಳಿಸುವ ಕೆಲಸ ಮಾಡಬೇಡಿ, ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ, ಖಾದರ್ ಅವರದ್ದು ಸಾಂವಿಧಾನಿಕ ಹುದ್ದೆ. ಸಂವಿಧಾನದ ಬಗ್ಗೆ ಅರ್ಥ ಆಗದ ಜಮೀರ್ ಥರದವವರು ಸಚಿವರಾದರೆ ಹೀಗೇ ಆಗೋದು. ಖಾದರ್ ಅವರ ಘನತೆಯನ್ನು ಹಾಳು ಮಾಡಬೇಡಿ ಎಂದು ಸಿಟಿ ರವಿ ಜಮೀರ್ ಅವರ ಕಾಲೆಳೆದಿದ್ದಾರೆ.